ಸರ್ಕಾರದೊಂದಿಗೆ 2ನೇ ಸುತ್ತಿನ ಮಾತುಕತೆ ವಿಫಲ : ಸರ್ಕಾರಿ ಕಚೇರಿ ಮುಂಭಾಗದಲ್ಲಿ ಸುದೀರ್ಘ ಪ್ರತಿಭಟನೆಗೆ ರೈತರ ನಿರ್ಧಾರ

Prasthutha|

ಚಂಡೀಗಡ: ಹರ್ಯಾಣದ ಕರ್ನಾಲ್ ಎಂಬಲ್ಲಿ ರೈತರು ನಡೆಸಲುದ್ದೇಶಿಸಿದ ಮಹಾಪಂಚಾಯತ್ ಜಾಥಾಕ್ಕೆ ತಡೆಯೊಡ್ಡಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಮತ್ತು ಜಲಫಿರಂಗಿ ಪ್ರಯೋಗದಿಂದಾಗಿ ಹಲವಾರು ರೈತರು ಗಾಯಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಬಿಗಿಗೊಳಿಸಿದ ರೈತರು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಈ ಸಂಬಂಧ ಭಾರತೀಯ ಕಿಸಾನ್ ಯೂನಿಯನ್ ಮುಖಂಡರೊಂದಿಗೆ ಸರ್ಕಾರ ನಿನ್ನೆ ನಡೆಸಿದ ಮಾತುಕತೆ ವಿಫಲವಾಗಿತ್ತು.

- Advertisement -

ಈ ಹಿನ್ನೆಲೆಯಲ್ಲಿ ತಮ್ಮ ಆಕ್ರೋಶವನ್ನು ಪ್ರದರ್ಶಿಸಿ ಇಂದು ಮತ್ತೆ ಪ್ರತಿಭಟನೆಗಿಳಿದ ರೈತರನ್ನು ಸರ್ಕಾರ ಮತ್ತೆ ಮಾತುಕತೆಗೆ ಆಹ್ವಾನಿಸಿತ್ತು. ಪ್ರಸಕ್ತ ನಡೆದ ಮಾತುಕತೆಯಲ್ಲಿ ರೈತರ ಮೇಲೆ ಲಾಠಿಚಾರ್ಜ್ ಮತ್ತು ಜಲಫಿರಂಗಿ ಪ್ರಯೋಗಿಸಿ ರೈತರನ್ನು ಗಾಯಗೊಳಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಮುಂದಾಗದ ಹಿನ್ನೆಲೆಯಲ್ಲಿ 2ನೇ ಸುತ್ತಿನ ಮಾತುಕತೆ ವಿಫಲವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವರಾಜ್ ಇಂಡಿಯಾದ ಮುಖ್ಯಸ್ಥ ಯೋಗೇಂದ್ರ ಯಾದವ್ ಮತ್ತು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಅವರು ಪೊಲೀಸರ ವಿರುದ್ಧ ಕಾನೂನು ಕ್ರಮ ಜಗುಗಿಸದ ಹಿನ್ನೆಲೆಯಲ್ಲಿ ನಮ್ಮ ಹೋರಾಟವನ್ನು ಇನ್ನಷ್ಟು ಕ್ಷಿಪ್ರಗತಿಗೆ ಕೊಂಡೊಯ್ಯುತ್ತೇವೆ. ಮಾತ್ರವಲ್ಲದೆ ಸರ್ಕಾರಿ ಕಚೇರಿ ಮುಂಭಾಗದಲ್ಲಿ ಸುದೀರ್ಘ ಅವಧಿಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಗುಡುಗಿದರು.

- Advertisement -