ಮೋದಿ ‘ಮನ್ ಕೀ ಬಾತ್’ ಭಾಷಣದ ವೇಳೆ ಖಾಲಿ ತಟ್ಟೆ ಬಡಿದು ಆಕ್ರೋಶ ಹೊರಹಾಕಿದ ರೈತರು

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ವರ್ಷದ ಕೊನೆಯ ‘ಮನ್ ಕೀ ಬಾತ್’ ಭಾಷಣವನ್ನು ಬಿಜೆಪಿಗರು ಸಂಭ್ರಮಿಸುತ್ತಿದ್ದರೆ, ಕೇಂದ್ರದ ನೂತನ ಕೃಷಿ ನೀತಿ ವಿರೋಧಿಸಿ ಕೊರೆವ ಚಳಿಯಲ್ಲೂ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಉತ್ತರ ಭಾರತದ ರೈತರು ಖಾಲಿ ತಟ್ಟೆ ಬಡಿಯುವ ಮೂಲಕ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

- Advertisement -

ಭಾರತ ಅಂತಾರಾಷ್ಟ್ರೀಯ ಗುಣಮಟ್ಟದ ವಸ್ತುಗಳ ಉತ್ಪನ್ನ ತಯಾರಿಕೆಯತ್ತ ಗಮನ ಹರಿಸಬೇಕೆಂದು ಪ್ರಧಾನಿ ಮೋದಿ ಇಂದು ಬೆಳಗ್ಗೆ ತಮ್ಮ ರೇಡಿಯೊ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ತಿಳಿಸಿದರು.

ಆದರೆ. ಮೋದಿಯವರ ಭಾಷಣಕ್ಕೆ ಆಕ್ರೋಶ ವ್ಯಕ್ತಪಡಿಸಿ ರೈತರು ಖಾಲಿ ತಟ್ಟೆ ಬಡಿದು ಆಕ್ರೋಶ ಹೊರಹಾಕಿದರು. ಪ್ರಧಾನಿಯವರ ರೇಡಿಯೊ ಭಾಷಣದ ವೇಳೆ ‘ಚಪ್ಪಾಳೆ’ ತಟ್ಟುವಂತೆ ಕಳೆದ ವಾರ ಸ್ವರಾಜ್ ಇಂಡಿಯಾದ ಮುಖ್ಯಸ್ಥ ಯೋಗೇಂದ್ರ ಯಾದವ್ ಕರೆ ನೀಡಿದ್ದರು.

Join Whatsapp