ಫರಂಗಿಪೇಟೆ: ಅಪಾಯಕಾರಿ ವಿದ್ಯುತ್‌ ಕಂಬ ತೆರವು

Prasthutha|

- Advertisement -

ಸ್ಪೀಕರ್ ಯು.ಟಿ ಖಾದರ್ ಕರೆಗೆ ಎಚ್ಚೆತ್ತ ಮೆಸ್ಕಾಂ ಅಧಿಕಾರಿಗಳು

ಬಂಟ್ವಾಳ: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜತ್ಕಳ ಬಳಿ ಅಪಾಯಕಾರಿ ವಿದ್ಯುತ್‌ ಕಂಬ, ಪರಿವರ್ತಕಗಳನ್ನು ಮೆಸ್ಕಾಂ ತೆರವುಗೊಳಿಸಿದೆ.

- Advertisement -


ಅಮ್ಮೆಮಾರ್- ಕುಂಜತ್ಕಳ ರಸ್ತೆಯಲ್ಲಿ ಅಪಾಯ ಮಟ್ಟದಲ್ಲಿ ವಿದ್ಯುತ್ ಕಂಬವಿದ್ದು, ತುರ್ತಾಗಿ ಸ್ಥಳಾಂತರಿಸುವಂತೆ ಕುಂಜತ್ಕಲ ನಿವಾಸಿಗಳು ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್, ಪುದು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಮ್ಲಾನ್ ಮಾರಿಪಳ್ಳ, ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಕ್ಬಾಲ್ ಸುಜೀರ್ ಅವರಿಗೆ ಮನವಿ ಮಾಡಿದ್ದರು. ಅಲ್ಲದೆ ಶಾಸಕ, ಸ್ಪೀಕರ್ ಖಾದರ್ ಅವರು ಅಧಿಕಾರಿಗಳ ಜೊತೆ ದೂರವಾಣಿಯ ಮೂಲಕ ಮಾತನಾಡಿ ಸ್ಪಂದಿಸುವಂತೆ ಆದೇಶ ನೀಡಿದ್ದರು. ಸ್ಪೀಕರ್ ಕರೆ ನೀಡಿದ ಬೆನ್ನಲ್ಲೆ ಎಚ್ಚೆತ್ತ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್‌ ಕಂಬ, ಪರಿವರ್ತಕಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಿದ್ದಾರೆ.

ಈ ವೇಳೆ ಬದ್ರುದ್ದೀನ್ ಕರ್ಮಾರ್, ಗುತ್ತಿಗೆದಾರ ಕೀಶೋರ್, ಮಾಜಿ ಗ್ರಾ.ಪಂ ಸದಸ್ಯ ಲತೀಫ್ ಕಾರ್ಮಾರ್, ಮಾಜಿ ಗ್ರಾ.ಪಂ ಸದಸ್ಯ ಇಸ್ಮಾಯಿಲ್ ಐಕೆ, ಮುಸ್ತಫಾ ಕೇಸನಮೊಗೆರು, ನಿಝಾಮ್ ಕುಂಜತ್ಕಲ, ಸಮದ್ ಕುಂಜತ್ಕಲ್ ಸಿದ್ದೀಕ್ ಕುಂಜತ್ಕಲ ಹಾಗೂ ಇತರರು ಉಪಸ್ಥಿತರಿದ್ದರು.

ಶಾಸಕ ಯುಟಿ ಖಾದರ್ ಹಾಗೂ ಸಹಕರಿಸಿದರಿಗೆ ಕುಂಜತ್ಕಲ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪುದು ಗ್ರಾಮದಲ್ಲಿ ಇಂತಹ ಹಲವು ವಿದ್ಯುತ್ ಕಂಬ, ತಂತಿಗಳು ಶಿಥಿಲಗೊಂಡಿದ್ದು ಹಾಗೂ ಅದಷ್ಟು ಬೇಗನೆ ಜೀಪ್ ವಾಹನದ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದಾಗಿ ಮೆಸ್ಕಾಂ ಎಂಡಿ ಭರವಸೆ ನೀಡಿದ್ದಾರೆ.



Join Whatsapp
Exit mobile version