Home ಟಾಪ್ ಸುದ್ದಿಗಳು ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಸ್ಥಿತಿ ಗಂಭೀರ

ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಸ್ಥಿತಿ ಗಂಭೀರ

ಮುಂಬೈ: ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ 11 ರಂದು ಕೋವಿಡ್ ದೃಢಪಟ್ಟ ಕಾರಣ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಗಾಯಕಿ ನ್ಯುಮೋನಿಯಾ ದಿಂದ  ಕೂಡ ಬಳಲುತ್ತಿದ್ದರು.

1949 ರಲ್ಲಿ ತಮ್ಮ 13 ನೇ ವಯಸ್ಸಿನಲ್ಲಿ ಚಲನಚಿತ್ರ ಹಿನ್ನಲೆ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿದ  ಲತಾ ಮಂಗೇಶ್ಕರ್ ಭಾರತೀಯ ಹಲವು ಭಾಷೆಗಳಲ್ಲಿ 30,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನಲೆ ಗಾಯಕಿಯರಲ್ಲಿ ಒಬ್ಬರಾದ ಲತಾ ಮಂಗೇಶ್ಕರ್ 2001ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದಿದ್ದಾರೆ. ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹಿಬ್ ಫಾಲ್ಕೆ ಪ್ರಶಸ್ತಿ ಮತ್ತು ಇತರ ಅನೇಕ ಪ್ರಶಸ್ತಿಗಳು ಲತಾ ಮಂಗೇಶ್ಕರ್ ಗೆ ಒಲಿದಿವೆ. ಅವರನ್ನು ಭಾರತದ ಗಾನ ಕೋಗಿಲೆ ಎಂದು ಕರೆಯಲಾಗುತ್ತದೆ.

Join Whatsapp
Exit mobile version