Home ಟಾಪ್ ಸುದ್ದಿಗಳು ಕೌಟುಂಬಿಕ ಕಲಹ: ಪತ್ನಿ ಕಾರಿನ ಮೇಲೆ ಕಾರು ಗುದ್ದಿಸಿ ಹಲ್ಲೆ..!

ಕೌಟುಂಬಿಕ ಕಲಹ: ಪತ್ನಿ ಕಾರಿನ ಮೇಲೆ ಕಾರು ಗುದ್ದಿಸಿ ಹಲ್ಲೆ..!

ಥಾಣೆ: ಕುಟುಂಬ ಕಲಹ ತಾರಕಕ್ಕೇರಿ ರಸ್ತೆಯಲ್ಲಿಯೇ ದುಬಾರಿ SUV ಕಾರಿನ ಮೂಲಕ ಪರಸ್ಪರ ಗುದ್ದಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.


ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಿನ್ನೆ ಮಂಗಳವಾರ ಎಸ್ ಯುವಿ ಚಾಲಕನೊಬ್ಬ ಉದ್ದೇಶಪೂರ್ವಕವಾಗಿ ತನ್ನ ವಾಹನವನ್ನು ಮತ್ತೊಂದು ಕಾರಿಗೆ ಎರಡು ಬಾರಿ ಡಿಕ್ಕಿ ಹೊಡೆದಿದ್ದರಿಂದ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ.


ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನನಿಬಿಡ ರಸ್ತೆಯಲ್ಲಿ ಕಪ್ಪು ಬಣ್ಣದ ಎಸ್ಯುವಿ ಪದೇ ಪದೇ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ.


ಖಾಸಗಿ ವಾಹಿನಿಯೊಂದರ ವರದಿಯ ಪ್ರಕಾರ ಕಪ್ಪು ಬಣ್ಣದ ಎಸ್ಯುವಿ ಚಲಾಯಿಸುತ್ತಿದ್ದ ವ್ಯಕ್ತಿ ಮತ್ತು ಆತನ ಪತ್ನಿಯ ನಡುವಿನ ಜಗಳ ಈ ಘಟನೆಗೆ ಕಾರಣವಂತೆ. ಇತರ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ಮಹಿಳೆ ಮತ್ತು ದಂಪತಿಯ ಮಗುವನ್ನು ತಮ್ಮೊಂದಿಗೆ ಕರೆದೊಯ್ಯಲು ನಿರ್ಧರಿಸಿದ ನಂತರ, ಕೋಪಗೊಂಡ ವ್ಯಕ್ತಿ ಉದ್ದೇಶಪೂರ್ವಕವಾಗಿ ಅವರು ಚಲಿಸುತ್ತಿದ್ದ ಬಿಳಿ ಬಣ್ಣದ ಕಾರಿಗೆ ತನ್ನ ಕಪ್ಪು ಬಣ್ಣಗ ಕಾರಿನ ಮೂಲಕ ಢಿಕ್ಕಿಹೊಡೆಸಿದ್ದಾನೆ. ಫಾರ್ಚುನರ್ ಕಾರಿನ ಹಿಂಬದಿಯ ಸೀಟಿನಲ್ಲಿ ತಾಯಿ ಮತ್ತು ಮಗು ಕುಳಿತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

Join Whatsapp
Exit mobile version