Home ಟಾಪ್ ಸುದ್ದಿಗಳು ಒಂದೂವರೆ ವರ್ಷ ಬಂಧನ ಕೇಂದ್ರದಲ್ಲಿದ್ದ ಕುಟುಂಬದ ಬಿಡುಗಡೆ | ‘ವಿದೇಶಿಗರು’ ಎಂದು ಘೋಷಿಸಲ್ಪಟ್ಟಿದ್ದ ಹುಸೇನ್ ಕುಟುಂಬಕ್ಕೆ...

ಒಂದೂವರೆ ವರ್ಷ ಬಂಧನ ಕೇಂದ್ರದಲ್ಲಿದ್ದ ಕುಟುಂಬದ ಬಿಡುಗಡೆ | ‘ವಿದೇಶಿಗರು’ ಎಂದು ಘೋಷಿಸಲ್ಪಟ್ಟಿದ್ದ ಹುಸೇನ್ ಕುಟುಂಬಕ್ಕೆ ಕೊನೆಗೂ ಮುಕ್ತಿ!

ಕೊಲ್ಕತಾ : ಒಂದೂವರೆ ವರ್ಷದಿಂದ ‘ಕಾನೂನು ಬಾಹಿರ ವಿದೇಶಿಗರು’ ಎಂಬ ಆರೋಪದಲ್ಲಿ ಅಸ್ಸಾಂನ ಕುಟುಂಬವೊಂದು ಬಂಧನ ಕೇಂದ್ರದಲ್ಲಿ ಬಂಧಿತವಾಗಿತ್ತು. ಇದೀಗ ಹೊಸ ವರ್ಷದ ಸಂದರ್ಭದಲ್ಲಿ ‘ವಿದೇಶಿಗರ’ ಟ್ರಿಬ್ಯೂನಲ್ ನಲ್ಲಿ ನಿರ್ದೋಷಿಗಳಾಗಿ ಅವರು ಭಾರತೀಯರೇ ಎಂದು ಘೋಷಿಸಲ್ಪಟ್ಟು ಬಂಧನ ಮುಕ್ತರಾಗಿದ್ದಾರೆ.

ಮುಹಮ್ಮದ್ ನೂರ್ ಹುಸೇನ್ (34), ಅವರ ಪತ್ನಿ ಸಹೇರಾ ಬೇಗಂ (26) ಮತ್ತು ಇಬ್ಬರು ಮಕ್ಕಳನ್ನು ಬಾಂಗ್ಲಾದೇಶಿಗಳೆಂದು ಘೋಷಿಸಲಾಗಿತ್ತು. ಆದರೆ, ಈಗ ಅವರು ಭಾರತೀಯರೇ ಎಂಬುದು ಸಾಬೀತಾಗಿದೆ.

“ನಾವು ಹೆಮ್ಮೆಯ ಭಾರತೀಯರು, ನಾವು ಅಸ್ಸಾಂಗೆ ಸೇರಿದವರು. ಅವರು ನಮ್ಮನ್ನು ತಪ್ಪಾಗಿ ಬಾಂಗ್ಲಾದೇಶಿಗಳು, ನಾವು ಗಡಿ ದಾಟಿ ಅಕ್ರಮವಾಗಿ ಬಂದಿದ್ದೇವೆ ಎಂದು ಆಪಾದಿಸಿದ್ದರು. ಅದು ಹೇಗೆ ಸಾಧ್ಯ? ನಾನು ಇಲ್ಲೇ ಜನಿಸಿದ್ದೇನೆ” ಎಂದು ಹುಸೇನ್ ತಿಳಿಸಿದ್ದಾರೆ.

ಗುವಾಹತಿಯಲ್ಲಿ ರಿಕ್ಷಾ ಎಳೆದು ಜೀವನ ನಡೆಸುವ ಹುಸೇನ್ ರ ತಂದೆ ಮತ್ತು ಅಜ್ಜ-ಅಜ್ಜಿಯ ಹೆಸರು 1965ರ ಮತದಾರರ ಪಟ್ಟಿಯಲ್ಲಿ ಮತ್ತು 1951ರ ಎನ್ ಆರ್ ಸಿಯಲ್ಲಿ ಹೆಸರಿದೆ. ಬೇಗಂರ ಹೆತ್ತವರ ಹೆಸರೂ 1951ರ ಎನ್ ಆರ್ ಸಿಯಲ್ಲಿ ಮತ್ತು 1966ರ ಮತದಾರರ ಪಟ್ಟಿಯಲ್ಲೂ ಇದೆ. ಕುಟುಂಬದ ಬಳಿ 1958-59ರ ಭೂ ದಾಖಲೆಯನ್ನೂ ಹೊಂದಿದೆ.    

Join Whatsapp
Exit mobile version