Home ಟಾಪ್ ಸುದ್ದಿಗಳು ಜೈ ಶ್ರೀರಾಮ್ ಹೇಳುವಂತೆ ವೃದ್ಧನಿಗೆ ಹಲ್ಲೆ | ಮಂತ್ರ ತಗಡು ಪೊಲೀಸ್ ಸೃಷ್ಟಿ ಎಂದ ಸಂತ್ರಸ್ತನ...

ಜೈ ಶ್ರೀರಾಮ್ ಹೇಳುವಂತೆ ವೃದ್ಧನಿಗೆ ಹಲ್ಲೆ | ಮಂತ್ರ ತಗಡು ಪೊಲೀಸ್ ಸೃಷ್ಟಿ ಎಂದ ಸಂತ್ರಸ್ತನ ಕುಟುಂಬ

ಗಾಝಿಯಾಬಾದ್: ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ಮುಸ್ಲಿಂ ವೃದ್ಧನನ್ನು ಗುಂಪೊಂದು ಜೈ ಶ್ರೀರಾಮ್ ಜಪಿಸುವಂತೆ ಬಲವಂತಪಡಿಸಿ ಥಳಿಸಿ ಗಡ್ಡ ಕತ್ತರಿಸಿದ್ದು, ಈ ಘಟನೆಯ ಬಗ್ಗೆ ಪೊಲೀಸರು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವೃದ್ಧನ ಕುಟುಂಬ ತಿಳಿಸಿದೆ.

ಮಂತ್ರ ತಗಡು ಮಾರಾಟಕ್ಕೆ ಸಂಬಂಧಿಸಿ ಈ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಕಥೆ ಸೃಷ್ಟಿಸುತ್ತಿದ್ದಾರೆ ಎಂದು ವೃದ್ಧನ ಮಕ್ಕಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು ಮತ್ತು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ 9 ಮಂದಿಯ ವಿರುದ್ಧ ಪ್ರಕರಣ ದಾಖಲಾದ ನಂತರ ಕುಟುಂಬ ಈ ವಿಷಯವನ್ನು ಬಹಿರಂಗಪಡಿಸಿದೆ.

ಜೂನ್ 5ರಂದು ಅಬ್ದುಸ್ಸಮದ್ ಎಂಬ ವೃದ್ಧನನ್ನು ಗುಂಪೊಂದು ಥಳಿಸಿತ್ತು. ತನ್ನನ್ನು ಗುಂಪೊಂದು ಅಪಹರಿಸಿ ಜೈ ಶ್ರೀ ರಾಮ್ ಮತ್ತು ವಂದೇ ಮಾತರಂ ಜಪಿಸಲು ಬಲವಂತಪಡಿಸಿ ಥಳಿಸಿದ್ದಾರೆ ಎಂದು ಅಬ್ದುಸ್ಸಮದ್ ಆರೋಪಿಸಿದ್ದರು. ಆದರೆ, ನಿಷ್ಕ್ರಿಯ ಮಂತ್ರ ತಗಡನ್ನು ಮಾರಾಟ ಮಾಡಿದ್ದಕ್ಕಾಗಿ ಆರೋಪಿಗಳು ವೃದ್ಧನಿಗೆ ಥಳಿಸಿದ್ದಾರೆ ಎಂಬುದು ಪೊಲೀಸರ ವಾದ. ಅಬ್ದುಸ್ಸಮದ್ ಅವರ ಮಗ ಬಬ್ಲೂ ಸೈಫ್ ಈ ಆರೋಪವನ್ನು ಅಲ್ಲಗಳೆದಿದ್ದು, ಪೊಲೀಸರ ವಾದ ಹಸಿ ಸುಳ್ಳು ಎಂದು NDTVಗೆ ತಿಳಿಸಿದ್ದಾರೆ.

Join Whatsapp
Exit mobile version