ಕೋಲ್ಕತ್ತಾ: ಇಲ್ಲಿನ ಬಿರ್ಭೂಮ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದಾರೆ.
ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮೃತರ ಕುಟುಂಬಸ್ಥರೊಂದಿಗೆ ಮಾತನಾಡಿದ ಅವರು, ಈ ಹತ್ತು ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳುವಂತೆ ಬಿರ್ಭುಮ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಾನು 10 ಮಂದಿಗೆ ಡಿ ಗ್ರೂಪ್ ಉದ್ಯೋಗ ನೀಡುತ್ತಿದ್ದೇನೆ. ಆದರೆ ಬಿರ್ಭುಮ್ ಹಿಂಸಾಚಾರದಲ್ಲಿ ನಾವು ಕಳೆದುಕೊಂಡವರನ್ನು ಎಂದಿಗೂ ಹಿಂತಿರುಗಿಸಲಾಗುವುದಿಲ್ಲ, ಆದರೆ ಎಲ್ಲರೂ ಮುಂದಕ್ಕೆ ಸಾಗಿ, ಬದುಕು ನಡೆಸಬೇಕಾಗಿದೆ ಎಂದು ಹೇಳಿದರು.