Home ಟಾಪ್ ಸುದ್ದಿಗಳು ಬಂಟ್ವಾಳ | ಮುಸ್ಲಿಂ ಯುವಕನ ಮೇಲೆ ಸುಳ್ಳು ಕೇಸ್: ಪೊಳಲಿ ಮಸೀದಿ, ದೇವಸ್ಥಾನದಲ್ಲಿ ಸತ್ಯ ಪ್ರಮಾಣಕ್ಕೆ...

ಬಂಟ್ವಾಳ | ಮುಸ್ಲಿಂ ಯುವಕನ ಮೇಲೆ ಸುಳ್ಳು ಕೇಸ್: ಪೊಳಲಿ ಮಸೀದಿ, ದೇವಸ್ಥಾನದಲ್ಲಿ ಸತ್ಯ ಪ್ರಮಾಣಕ್ಕೆ ಸಿದ್ಧ; ಕುಟುಂಬಸ್ಥರು

ಬಂಟ್ವಾಳ: ತಾಲೂಕಿನ ಕರಿಯಂಗಳದ ಯುವಕ ತಶ್ರೀಫ್ ಎಂಬುವವರು ಹಿಂದೂ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆಂದು ಅದೇ ಪರಿಸರದ ಕೆಲವರು ಸುಳ್ಳು ಕೇಸು ದಾಖಲಿಸಿದ್ದು, ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ತೇಜೋವಧೆ ನಡೆಸಿದ್ದಾರೆ.


ಈ ಬಗ್ಗೆ ಸತ್ಯ ಪ್ರಮಾಣ ಮಾಡಲು ಯುವಕನ ಕುಟುಂಬಸ್ಥರು ಧಾರ್ಮಿಕ ಕ್ಷೇತ್ರ ಗಳಾದ ಪೊಳಲಿ ಮಸೀದಿ ಹಾಗೂ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬರಲು ಅಹ್ವಾನ ನೀಡಿದ್ದಾರೆ. ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರ ಕೋರಗಜ್ಜನ ಕ್ಷೇತ್ರಕ್ಕೂ ಬರಲು ನಾವು ತಯಾರಿದ್ದೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ನಡೆದದ್ದೇನು?
ದಿನಾಂಕ 03/08/2024 ರಂದು ಸಂಜೆ 06 ಗಂಟೆಗೆ ನೆರೆಯ ರಾಮ ಮೂಲ್ಯ ಎಂಬವರ ಪುತ್ರ ಪದ್ಮನಾಭ ಎಂಬಾತ ಕರಿಯಂಗಳ ಮಸೀದಿ ಅಧ್ಯಕ್ಷರಾದ ಉಸ್ಮಾನ್ ರವರ ಮನೆಯ ಅಂಗಳಕ್ಕೆ ಬಂದು ಅವಾಚ್ಯ ಶಬ್ದ ಗಳಿಂದ ಬೈದು, ಕೊಡಲಿಯಿಂದ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ನಂತರ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಉಸ್ಮಾನ್ ರವರು ಬಂಟ್ವಾಳ ಠಾಣೆಗೆ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಈ ಘಟನೆ ನಂತರ ಪದ್ಮನಾಭ ಎಂಬುವವರು ಉಸ್ಮಾನ್ ರವರ ಮಗ ತಸ್ರಿಫ್ ನ ಮೇಲೆ ಮಹಿಳೆಗೆ ಹಲ್ಲೆ ನಡೆಸಿದ್ದಾರೆ ಹಾಗೂ ಮೈ ಗೆ ಕೈ ಹಾಕಿದ್ದಾನೆ ಎಂದು ಸುಳ್ಳು ಕೇಸು ದಾಖಲಿಸಿದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಧರ್ಮದ ಅವಹೇಳನ ಮತ್ತು ತಸ್ರಿಫ್ ನ ತೇಜೋವದೆ ನಡೆಸಿದ್ದಾರೆ. ಕುಟುಂಬವು ಸುಳ್ಳು ಕೇಸಿನಿಂದ ಮಾನಸಿಕವಾಗಿ ಜರ್ಜರಿತವಾಗಿದ್ದು ನಿಂದನೆ ಅನುಭವಿಸಿದ್ದಾರೆ.
ಇದುವರೆಗೂ ಯಾವುದೇ ಅಪರಾಧ ಮಾಡದ ಅಮಾಯಕನನ್ನು ಕುತಂತ್ರದ ಮೂಲಕ ಸಿಲುಕಿಸಿ ಕುಟುಂಬದ ಮಾನಸಿಕ ನೆಮ್ಮದಿಗೆ ಕೊಳ್ಳಿ ಇಟ್ಟ ಕೋಮುವಾದಿಗಳಿಗೆ ತಕ್ಕ ಶಿಕ್ಷೆ ಯಾಗಲಿ ಹಾಗೂ ಕುತಂತ್ರದ ಮೂಲಕ ಸಿಲುಕಿಸಿ ಅಮಾಯಕನನ್ನು ಬಂದಿಸುವಲ್ಲಿ ಸಫಲರಾಗಿದ್ದಾರೆ. ಮಾತ್ರವಲ್ಲದೆ ಕೊಲೆ ಬೆದರಿಕೆ ಹಾಕಿದ ಆರೋಪಿಗಳ ಮೇಲೆ ಎಫ್ ಐ ಆರ್ ದಾಖಲಾಗಿದ್ದರೂ ರಾಜಾರೋಷವಾಗಿ ತಿರುಗಾಡುತ್ತಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ ಎಂದು ಜುಮಾ ಮಸೀದಿ ಕರಿಯಂಗಳದ ಅಧ್ಯಕ್ಷ ಉಸ್ಮಾನ್ ಕರಿಯಂಗಳ ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.


Join Whatsapp
Exit mobile version