February 23, 2021

ಕಾಸರಗೋಡಿನಲ್ಲಿ ಯೋಗಿ ಅದಿತ್ಯನಾಥ್ | ‘ವಿಜಯ ಯಾತ್ರೆ’ಯ ಫೇಕ್ ಫೋಟೋ ಹರಡಿದ ಬಿಜೆಪಿಗರು!

ಕಾಸರಗೋಡು : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಭಾನುವಾರ ರ್ಯಾಲಿಗೆ ಆಗಮಿಸಿದಾಗ ಬಿಜೆಪಿಯ ಚಿಹ್ನೆಯಾದ ಕಮಲವನ್ನು ರಚಿಸಿರುವ ಜನರ ಒಂದು ದೊಡ್ಡ ಗುಂಪಿನ ಚಿತ್ರಣವನ್ನು ಬಿಜೆಪಿ ಕಾರ್ಯಕರ್ತರು ಹಂಚಿಕೊಂಡಿದ್ದರು.

ಕೇರಳದ ಈ ದಿನದ ಚಿತ್ರ, #keralawelcomesyogiji ಎಂಬ ಹ್ಯಾಶ್ ಟ್ಯಾಗಿನೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರವೊಂದನ್ನು ಪ್ರಚಾರ ಮಾಡಲಾಗಿತ್ತು. ಆದರೆ ಈ ಚಿತ್ರವನ್ನು ಏಪ್ರಿಲ್ 2015ರಲ್ಲಿ ಗುಜರಾತ್‌ ನ ದಾಹೋಡ್‌ ನ ಕಾಲೇಜು ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದಾಗ ತೆಗೆದುಕೊಂಡದ್ದಾಗಿದೆ. ಆ ಘಟನೆಯ ಫೋಟೊ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಸೇರಿದಂತೆ ಹಲವು ಪತ್ರಿಕೆಗಳು ವರದಿಯಾಗಿತ್ತು.

ಫೆಬ್ರವರಿ 21 ರಂದು ಯೋಗಿಯ ಕಾಸರಗೋಡು ರ್ಯಾಲಿಯ ಚಿತ್ರಗಳನ್ನು ಕೇರಳ ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ ನಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ವೈರಲ್ ಆಗುತ್ತಿರುವ ಚಿತ್ರವು ಸುಮಾರು ಆರು ವರ್ಷ ಹಳೆಯದಾಗಿದೆ ಮತ್ತು ಭಾನುವಾರ ಕಾಸರಗೋಡಿನಲ್ಲಿ ನಡೆದ ಯೋಗಿಯ ರ್ಯಾಲಿಯದಲ್ಲ.

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ