ಮಂಗಳೂರಿನಲ್ಲಿ ನಕಲಿ ಕೀ ತಯಾರಿಕಾ ಅಂಗಡಿ “ಕೀ ಮ್ಯಾನ್” ಶುಭಾರಂಭ

Prasthutha|

ಮಂಗಳೂರು: ವಾಹನಗಳ ಯಾ ಇತರ ಯಾವುದೇ ಇತರ ಬೀಗದ ನಕಲಿ ಕೀ ತಯಾರಿ ಮಾಡುವ ಅಂಗಡಿ  “ಕೀ ಮ್ಯಾನ್  ನಗರದ ಹೃದಯ ಭಾಗವಾದ ಕ್ಲಾಕ್ ಟವರ್ ಮುಂಭಾಗದಲ್ಲಿ ಇಂದು ಶುಭಾರಂಭಗೊಂಡಿತು.

ಮಂಗಳೂರು ನಗರದಲ್ಲಿ ಇಂಥ ಅಂಗಡಿಗಳು ಬಹಳ ವಿರಳವಾಗಿದ್ದು, ಜನರಿಗೆ ಯಾವುದೇ ಸಂದರ್ಭದಲ್ಲಿ ತಮ್ಮ ಕೀ ಕಳೆದುಕೊಂಡ ಸಂದರ್ಭದಲ್ಲಿ ಸಹಾಯವಾಗಲಿ ಎಂಬ ಉದ್ದೇಶದಿಂದ ನಗರದ ಹೃದಯ ಭಾಗದಲ್ಲಿ “ಕೀ ಮ್ಯಾನ್” ಎಂಬ ಅಂಗಡಿ ತೆರೆದಿದ್ದು, ಇಲ್ಲಿ ನುರಿತ ಕೀ ತಯಾರಿಕಾ ತಜ್ಞರಿದ್ದು, ಯಾವುದೇ ಸಂದರ್ಭದಲ್ಲಿ ತಮ್ಮ ವಾಹನದ ಕೀ ಕಳೆದುಕೊಂಡಲ್ಲಿ ಅಥವಾ ಇನ್ನಿತರ ಬೀಗದ ಕೀ ಕಳೆದುಕೊಂಡಲ್ಲಿ ಆ ಸ್ಥಳದಲ್ಲೇ ಬಂದು ನಕಲಿ ಕೀ ತಯಾರಿ ಮಾಡಿಕೊಡುವ ವ್ಯವಸ್ಥೆಯೂ ಇದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.   ಎಂದು “ಕೀ ಮ್ಯಾನ್” ಮಾಲೀಕರಾದ ಇಕ್ಬಾಲ್ ಅವರು ತಿಳಿಸಿದ್ದಾರೆ.

- Advertisement -

ಜೀನತ್ ಭಕ್ಷ್ ಖತೀಬರಾದ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಅವರ ದುವಾ ಆಶೀರ್ವಾದದೊಂದಿಗೆ ಕೀ ಮ್ಯಾನ್ ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಮಾಲೀಕರಾದ ಇಕ್ಬಾಲ್, ಪರ್ಪಲ್ ಫ್ಲಾಶ್ ಮಾಲೀಕರಾದ ಫಹೀಂ, ಮಂಗಳೂರಿನ ವ್ಯಾಪಾರಸ್ಥರಾದ ಶುಹೈಬ್ ಇಬ್ರಾಹಿಂ, ಇಬ್ರಾಹಿಂ ಖಲೀಲ್, ಬೀ ಎಸ್ ಹೈದರ್ ಮುಂತಾದವರು ಉಪಸ್ಥಿತರಿದ್ದರು.

- Advertisement -