ಉತ್ತರ ಪ್ರದೇಶದ ಫೈಝಾಬಾದ್ ಜಂಕ್ಷನ್ ರೈಲ್ವೇ ನಿಲ್ದಾಣ ಇನ್ನು ಅಯೋಧ್ಯಾ ಕಂಟೋನ್ಮೆಂಟ್

Prasthutha|

ಲಕ್ನೊ: ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶ ಸರಕಾರದ ನಿರ್ಧಾರದ ನಂತರ ಫೈಝಾಬಾದ್ ಜಂಕ್ಷನ್ ರೈಲು ನಿಲ್ದಾಣವನ್ನು ನವೆಂಬರ್ 2 ಮಂಗಳವಾರದಂದು ಅಯೋಧ್ಯಾ ಕಂಟೋನ್ಮೆಂಟ್ ಎಂದು ಮರುನಾಮಕರಣ ಮಾಡಲಾಯಿತು ಎಂದು ಪಿಟಿಐ ಸುದ್ಧಿ ಸಂಸ್ಥೆ ವರದಿ ಮಾಡಿದೆ.

- Advertisement -

ಈ ಹಿಂದೆ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕಚೇರಿಯ ಟ್ವೀಟ್‌ನಲ್ಲಿ ಕೇಂದ್ರವು ಈ ನಿರ್ಧಾರಕ್ಕೆ ತನ್ನ ಒಪ್ಪಿಗೆ ನೀಡಿದೆ ಹಾಗೂ ಈ ವಿಷಯದಲ್ಲಿ ಅಧಿಸೂಚನೆಯನ್ನು ಹೊರಡಿಸಲು ಉತ್ತರಪ್ರದೇಶ ರಾಜ್ಯ ಆಡಳಿತಕ್ಕೆ ಅಧಿಕಾರ ನೀಡಿದೆ ಎಂದು ಹೇಳಿತ್ತು. ಉತ್ತರಪ್ರದೇಶ ಸರಕಾರವು ಫೈಝಾಬಾದ್ ಜಿಲ್ಲೆಯ ಹೆಸರನ್ನು ಅಯೋಧ್ಯೆ ಎಂದು ಬದಲಾಯಿಸಿದ ಮೂರು ವರ್ಷಗಳ ನಂತರ ಈ ಹೆಜ್ಜೆ ಇಡಲಾಗಿದೆ.

ಈ ಹಿಂದೆ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವು ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಹಾಗೂ ಮೊಘಲ್ಸರಾಯ್ ರೈಲ್ವೆ ಜಂಕ್ಷನ್ ಅನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರುನಾಮಕರಣ ಮಾಡಿತ್ತು, ಇದೀಗ ಫೈಝಾಬಾದ್ ಜಂಕ್ಷನ್ ರೈಲ್ವೇ ನಿಲ್ದಾಣವನ್ನು ಅಯೋಧ್ಯಾ ಕಂಟೋನ್ಮೆಂಟ್ ಎಂದು ಬದಲಾಯಿಸುವ ಮೂಲಕ ತನ್ನ ಹೆಸರು ಬದಲಾಯಿಸುವ ಚಾಳಿಯನ್ನು ಉತ್ತರ ಪ್ರದೇಶದ ಬಿಜೆಪಿ ಸರಕಾರ ಮುಂದುವರೆಸಿದೆ.



Join Whatsapp