ಫ್ಯಾಕ್ಟ್ ಚೆಕ್ | ಮುಸ್ಲಿಮ್ ಸಮುದಾಯ ನಿಝಾಮುದ್ದೀನ್ ನಲ್ಲಿ ಮೋದಿ ಜನ್ಮದಿನ ಆಚರಿಸಿದ್ದು ನಿಜವೇ?

Prasthutha|

 ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ 70ನೇ ಹುಟ್ಟುಹಬ್ಬವನ್ನು 2020 ಸೆಪ್ಟಂಬರ್ 17ರಂದು ಆಚರಿಸಿದರು. ಅದೇ ದಿನ ದೆಹಲಿಯ ಮುಸ್ಲಿಮ್ ಸಮುದಾಯವು ಮರ್ಕಝ್ ಕಟ್ಟಡದ ಹೊರಗೆ ಜಮಾಯಿಸಿ, ಪ್ರಾರ್ಥನೆ ನಡೆಸಿ ಮತ್ತು ಕೇಕ್ ಕತ್ತರಿಸುವುದರೊಂದಿಗೆ ಪ್ರಧಾನಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ‘‘ಕಳೆದ 6 ವರ್ಷಗಳಲ್ಲಿ ಪ್ರಧಾನಿ ಧರ್ಮ, ಜಾತಿ ಅಥವಾ ಧರ್ಮದ ಬಗ್ಗೆ ಎಂದಿಗೂ ಮಾತನಾಡಲಿಲ್ಲ. ಅವರು ನಮ್ಮ ದೇಶದ 130 ಕೋಟಿ ಜನರ ಬಗ್ಗೆ ಮಾತ್ರ ಮಾತನಾಡಿದ್ದಾರೆ’’ ಎಂದು ಮೌಲಾನ ಸುಹೈಬ್ ಖಾಸ್ಮಿ ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ನಿಝಾಮುದ್ದೀನ್ ಮರ್ಕಝ್ ತಬ್ಲೀಗಿ ಜಮಾಅತ್ ನ ಜಾಗತಿಕ ಪ್ರಧಾನ ಕಚೇರಿಯಾಗಿದ್ದು, ಕೋವಿಡ್-19 ಹಾಟ್ ಸ್ಪಾಟ್ ಎಂದು ಗುರುತಿಸಿದ ನಂತರ ಏಪ್ರಿಲ್ ಆರಂಭದಲ್ಲಿ ಮಾಧ್ಯಮಗಳು ಮರ್ಕಝ್ ಅನ್ನು ನಿಂದಿಸುತ್ತಾ ಬಂದವು. ಎಎನ್ಎ ವರದಿಯನ್ನು ಬಿಸಿನೆಸ್ ವರ್ಲ್ಡ್ ಮತ್ತು ಯಾಹೂ ನ್ಯೂಸ್ ಮರು ಪ್ರಕಟಿಸಿದವು. ‘‘ಮೌಲಾನ ಸಹಾಬ್ ಮೋದಿಯವರ ಜನ್ಮದಿನವನ್ನು ನಿಝಾಮುದ್ದೀನ್ ಮರ್ಕಝ್ ಗೇಟ್ ಮುಂದೆ ಆಚರಿಸಿದರು’’ ಎಂಬ ಶೀರ್ಷಿಕೆಯೊಂದಿಗೆ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

 ಫ್ಯಾಕ್ಟ್ಚೆಕ್:

 ನಿಝಾಮುದ್ದೀನ್ ಮರ್ಕಝ್ ಹೊರಗಡೆ ಪ್ರಧಾನಿ ಮೋದಿಯವರ ಜನ್ಮದಿನವನ್ನು ಆಚರಿಸುವ ಪುರುಷರ ಗುಂಪಿನ ವೀಡಿಯೋವನ್ನು ಸುಹೈಬ್ ಖಾಸ್ಮಿ ಎಂಬವರು ಅಪ್ಲೋಡ್ ಮಾಡಿದ್ದಾರೆ ಎಂದು ಎಎನ್ಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ಖಾಸ್ಮಿಯ ಫೇಸ್ಬುಕ್ ಬಯೋ, ಅವರು ಆರೆಸ್ಸೆಸ್ ಪರ ಕೆಲಸ ಮಾಡುತ್ತಾರೆ ಎಂದು ಹೇಳುತ್ತದೆ. ಅವರು ‘‘ಅಯೋಧ್ಯೆಯ ಭೂ ವಿವಾದವನ್ನು ಬಗೆಹರಿಸಲು ಎರಡೂ ಕಡೆಯ ಪ್ರಭಾವಿ ಜನರನ್ನು ಚರ್ಚಿಸಲು ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು’’ 2016ರಲ್ಲಿ ರಚಿಸಲಾದ ಅಯೋಧ್ಯೆ ವರ್ತಿ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ ಎಂದು 2019ರ ಎಎನ್ಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ಪ್ರಧಾನಿ ಮೋದಿಯವರ 70ನೇ ಹುಟ್ಟುಹಬ್ಬದಂದು ಅದೇ ಗುಂಪಿನ ಪುರುಷರು ಮೋದಿಯವರನ್ನು ಗೌರವಿಸುವುದನ್ನು ಕಾಣುವ ಮತ್ತೊಂದು ವೀಡಿಯೋವನ್ನು ಖಾಸ್ಮಿ ಟ್ವೀಟ್ ಮಾಡಿದ್ದಾರೆ. ಈ ವೀಡಿಯೋವನ್ನು ದೆಹಲಿಯ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಕೇಂದ್ರ ಕಚೇರಿಯ ಹೊರಗೆ ತೆಗೆಯಲಾಗಿದೆ.

 ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಈ ವೀಡಿಯೋದಲ್ಲೂ ಕಾಣಿಸಿಕೊಂಡಿದ್ದು, ಬಿಜೆಪಿಯ ಕೇಸರಿ-ಹಳದಿ ಶಾಲನ್ನು ಧರಿಸಿದ್ದಾನೆ. ಮಾತ್ರವಲ್ಲದೆ, ಬಿಜೆಪಿ ಕಚೇರಿಯೊಳಗೆ ಪ್ರಧಾನಿ ಮೋದಿಯವರ ಜನ್ಮದಿನಾಚರಣೆಯ ಮತ್ತೊಂದು ವೀಡಿಯೋವನ್ನು ಖಾಸ್ಮಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಟ್ವೀಟ್ನಲ್ಲಿ ಪಕ್ಷದ ಉನ್ನತ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ.

 ಎಎನ್ಐ ವರದಿಯು ಹೈದರಾಬಾದ್ ನ ಮೌಲಾನ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಕುಲಪತಿ ಫಿರೋಝ್ ಬಖ್ತ್ ಅಹ್ಮದ್ ರನ್ನು ಉಲ್ಲೇಖಿಸಿದೆ. ‘‘ಮೋದಿ ಜೀ ನಿಜವಾಗಿಯೂ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅನ್ನು ನಂಬುತ್ತಾರೆ. ಅವರನ್ನು ನಮ್ಮ ನಾಯಕ ಎಂದು ಕರೆಯಲು ನಾವು ಹೆಮ್ಮೆಪಡುತ್ತೇವೆ. ಮುಂದಿನ 10ರಿಂದ 20 ವರ್ಷಗಳ ವರೆಗೆ ಅವರು ಈ ಸ್ಥಾನದಲ್ಲಿ ಉಳಿಯುತ್ತಾರೆ ಎಂದು ನಾನು ಭಾವಿಸುತ್ತೇನೆ’’ ಎಂದು ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನ ಅಬುಲ್ ಕಲಾಂ ಆಝಾದ್ ರವರ ಮೊಮ್ಮಗ ಅಹ್ಮದ್ ಅವರ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ಬಿಜೆಪಿಯ ರಾಜಕೀಯ ಉಪಕ್ರಮಗಳಿಗೆ ಅಹ್ಮದ್ ರವರ ಬೆಂಬಲದ ಬಗ್ಗೆ ತಿಳಿದಿಲ್ಲ. ಅಯೋಧ್ಯೆಯಲ್ಲಿ ವಿವಾದಿತ ಭೂಮಿಯಲ್ಲಿ ರಾಮ್ ದೇವಾಲಯ ನಿರ್ಮಾಣಕ್ಕೆ ಅವರು ಬಹುಕಾಲ ಒಲವು ತೋರಿದ್ದಾರೆ, ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ಜಮ್ಮು-ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಪಡಿಸಿದ್ದನ್ನು ಬೆಂಬಲಿಸಿದ್ದಾರೆ. ಆರೆಸ್ಸೆಸ್ ನ ಮುಸ್ಲಿಮ್ ವಿಭಾಗವಾದ ಮುಸ್ಲಿಮ್ ರಾಷ್ಟ್ರೀಯ ಮಂಚ್ ನ ವೆಬ್ ಸೈಟ್ ನಲ್ಲಿ ಪ್ರಕಟವಾದ ಲೇಖನವನ್ನೂ ಅಹ್ಮದ್ ಬರೆದಿದ್ದರು. ಅಲ್ಲಿ ಸಂಘವನ್ನು ಮುಸ್ಲಿಮ್ ವಿರೋಧಿ ಎಂದು ಹೇಗೆ ತಪ್ಪಾಗಿ ಅರ್ಥೈಸಲಾಗಿದೆ ಎಂಬುದನ್ನು ವಿವರಿಸಲು ಅವರು ಪ್ರಯತ್ನಿಸಿದ್ದಾರೆ.

ಮುಸ್ಲಿಮ್ ವ್ಯಕ್ತಿಗಳನ್ನು ಭಾಗಶಃ ಗುರುತಿಸುವ, ಬಿಜೆಪಿಗೆ ಅವರ ಸಂಬಂಧ ಅಥವಾ ಬೆಂಬಲವನ್ನು ಮರೆಮಾಚುವ ವರದಿಯನ್ನು ಎಎನ್ಐ ಪ್ರಕಟಿಸಿರುವುದು ಇದೇ ಮೊದಲಲ್ಲ.  ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಸುದ್ದಿ ಸಂಸ್ಥೆ ‘‘ವಾರಣಾಸಿಯ ಮುಸ್ಲಿಮ್ ಮಹಿಳೆಯರು’’ ಹಿಂದೂ ಹಬ್ಬಗಳನ್ನು ಆಚರಿಸುತ್ತಿದ್ದಾರೆ ಅಥವಾ ಪ್ರಧಾನಮಂತ್ರಿಯನ್ನು ಹೊಗಳಿದ್ದಾರೆ ಎಂದು ಟ್ವೀಟ್ ಮಾಡಿತ್ತು.

 ಅದಾಗ್ಯೂ ಈ ಮಹಿಳೆಯರು ಕೇವಲ ವಾರಣಾಸಿಯ ಸಮುದಾಯದಿಂದ ಬಂದವರಲ್ಲ. ಅವರು ಪ್ರಧಾನಿ ಮೋದಿಯವರ ಬೆಂಬಲಿಗರಾಗಿದ್ದಾರೆ. ಎಎನ್ಐ ಟ್ವೀಟ್ ಗಳಲ್ಲಿ ಕಾಣಿಸಿಕೊಂಡಿರುವ ಮಹಿಳೆ ಭಾರತೀಯ ಅವಾಮ್ ಪಾರ್ಟಿ(ಬಿಎಪಿ)ಯನ್ನು ಪ್ರಚುರಪಡಿಸಿದ್ದು, ಪ್ರಧಾನಮಂತ್ರಿಗೆ ಬೇಷರತ್ತಾಗಿ ಬೆಂಬಲವನ್ನು ಘೋಷಿಸಿದ್ದರು. ಬಿಎಪಿ ಕೂಡಾ ಆರೆಸ್ಸೆಸ್ ನೊಂದಿಗೆ ವೇದಿಕೆಯನ್ನು ಹಂಚಿಕೊಂಡಿದೆ.

- Advertisement -