Home ಟಾಪ್ ಸುದ್ದಿಗಳು ಪಾಕಿಸ್ತಾನ್ ಜಿಂದಾಬಾದ್’ ಕೂಗಿದ್ದ ಅಮೂಲ್ಯ ರೈತ ಪ್ರತಿಭಟನೆಯಲ್ಲಿ ಭಾಗಿಯಾದ ಸುಳ್ಳು ಸುದ್ದಿಯ ಹಿನ್ನೆಲೆ ಏನು? ಇಲ್ಲಿದೆ...

ಪಾಕಿಸ್ತಾನ್ ಜಿಂದಾಬಾದ್’ ಕೂಗಿದ್ದ ಅಮೂಲ್ಯ ರೈತ ಪ್ರತಿಭಟನೆಯಲ್ಲಿ ಭಾಗಿಯಾದ ಸುಳ್ಳು ಸುದ್ದಿಯ ಹಿನ್ನೆಲೆ ಏನು? ಇಲ್ಲಿದೆ ವಿವರ

ಪಾಕಿಸ್ತಾನ್ ಜಿಂದಾಬಾದ್’ ಕೂಗಿದ್ದ ಅಮೂಲ್ಯ ರೈತ ಪ್ರತಿಭಟನೆಯಲ್ಲಿ ಭಾಗಿಯಾದ ಸುಳ್ಳು ಸುದ್ದಿಯ ಹಿನ್ನೆಲೆ ಏನು? ಇಲ್ಲಿದೆ ವಿವರ

ಕಳೆದ ವರ್ಷದ ಫೆಬ್ರವರಿಯಲ್ಲಿ ನಡೆದ ಎನ್ ಆರ್ ಸಿ ಪ್ರತಿಭಟನೆ ವೇಳೆ ಬೆಂಗಳೂರಿನ ಪ್ರತಿಭಟನೆಯೊಂದರಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದ ಆರೋಪದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ಎಂಬಾಕೆಯನ್ನು ಬಂಧಿಸಲಾಗಿತ್ತು. ಈಗ ದೆಹಲಿಯಲ್ಲಿ ನಡೆಯುತ್ತಿರುವ ರೈತ ಆಂದೋಲನದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಅಮೂಲ್ಯ ಭಾಗವಹಿಸಿದ್ದಾಳೆ ಎಂಬರ್ಥದ ಪೋಸ್ಟ್ ನೊಂದಿಗೆ ಕೆಲವು ಫೋಟೊಗಳು ವೈರಲ್ ಆಗಿದ್ದವು.  

 ‘ಎಐಎಂಐಎಂ ಸಭೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಅನ್ನು ಮೊಳಗಿಸಿದ ಅದೇ ಹುಡುಗಿ ಪ್ರತಿಭಟನೆಯಲ್ಲಿ. ಈ ಸಂಪರ್ಕ ಏನು? ಪ್ರತಿ ರಾಷ್ಟ್ರೀಯ ವಿರೋಧಿ ಪ್ರತಿಭಟನೆಯಲ್ಲಿ ಕಂಡುಬರುವ ಒಂದೇ ಮುಖಗಳ ಹಿಂದಿನ ಶಕ್ತಿಗಳು ಯಾರು? ಎಂಬ ಸಂದೇಶ ಫೇಸ್ ಬುಕ್ ಪೋಸ್ಟ್ ಒಂದರ ಮೂಲಕ ಹರಡಲಾಗಿದೆ.

ಇನ್ನೊಂದು ಇಮೇಜ್ ಕೊಲಾಜ್ ಮೇಲೆ ತೆಲುಗುವಿನಲ್ಲಿ “ಪಾಕಿಸ್ತಾನ ಜಿಂದಾಬಾದ್’ ಎಂದು ಹೇಳಿದ ಹುಡುಗಿ ಈಗ ನಾಯಕಿ, ಇದು ನಮ್ಮ ದುರಾದೃಷ್ಟ ಎಂದು ಬರೆಯಲಾಗಿದ್ದು, ಅದರಲ್ಲಿ ಒಂದು ಚಿತ್ರವು ಯುವತಿಯೊಬ್ಬಳು ಪುರುಷರ ಗುಂಪಿನೊಂದಿಗೆ ನಿಂತಿರುವುದನ್ನು ತೋರಿಸಿದರೆ, ಎರಡನೆಯ ಚಿತ್ರವು ಓವೈಸಿಯೊಂದಿಗೆ ಜಗಳವಾಡುತ್ತಿರುವ ಹುಡುಗಿಯನ್ನು ತೋರಿಸುತ್ತದೆ.

ವೈರಲ್ ಚಿತ್ರಗಳ ಫ್ಯಾಕ್ಟ್ ಚೆಕ್ ಮಾಡಿದ ‘ಇಂಡಿಯಾ ಟುಡೆ – ಸುಳ್ಳು ಸುದ್ದಿ ತಡೆ ನ್ಯೂಸ್ ರೂಂ (AFWA)’ ಇದು ಫೇಕ್ ಎಂಬುದನ್ನು ಪತ್ತೆ ಹಚ್ಚಿದೆ. ಇಮೇಜ್ ಕೊಲಾಜ್‌ ನಲ್ಲಿರುವ ಎರಡನೇ ಫೋಟೋ ಅಮೂಲ್ಯ ಅವರದ್ದು. ಆದರೆ, ಮೊದಲ ಚಿತ್ರದಲ್ಲಿರುವ ಹುಡುಗಿ ಅಮೂಲ್ಯ ಅಲ್ಲ, ಅದು 2021 ರ ಜನವರಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿದ್ದ ತಮಿಳುನಾಡಿನ ವಿದ್ಯಾರ್ಥಿ ಕಾರ್ಯಕರ್ತೆ ವಲಮತಿ ಎಂದು ಸ್ಪಷ್ಟಪಡಿಸಿದೆ.

ತಮಿಳುನಾಡಿನ ವಿದ್ಯಾರ್ಥಿ ಕಾರ್ಯಕರ್ತೆಯಾದ ವಲಮತಿ 2021 ರ ಜನವರಿ 26 ರಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಇದೇ ಫೋಟೋವನ್ನು ಹಂಚಿಕೊಂಡಿದ್ದರು. ಇದನ್ನು ಅಮೂಲ್ಯ ರೈತ ಆಂದೋಲನದಲ್ಲಿ ಭಾಗವಹಿಸಿದ್ದಾಳೆ ಎಂದು ಸುಳ್ಳುಸುದ್ದಿ ಹರಡಲು ಬಳಸಿಕೊಳ್ಳಲಾಗಿತ್ತು.

Join Whatsapp
Exit mobile version