Home ಟಾಪ್ ಸುದ್ದಿಗಳು ಫೇಸ್’ಬುಕ್ ಮಾಲಕ ಮೆಟಾ ಕಂಪೆನಿ 11 ಸಾವಿರಕ್ಕೂ ಅಧಿಕ ಸಿಬ್ಬಂದಿ ವಜಾ

ಫೇಸ್’ಬುಕ್ ಮಾಲಕ ಮೆಟಾ ಕಂಪೆನಿ 11 ಸಾವಿರಕ್ಕೂ ಅಧಿಕ ಸಿಬ್ಬಂದಿ ವಜಾ

ವಾಷಿಂಗ್ಟನ್: ಮೆಟಾ ಕಂಪೆನಿಯ ಆದಾಯ ಕುಸಿತದಿಂದಾಗಿ ಸಂಸ್ಥೆಯ ಖರ್ಚುನ್ನು ಕಡಿತಗೊಳಿಸುವ ನಿಟ್ಟಿನಲ್ಲಿ 11 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ವಜಾಗೊಳಿಸುವುದಾಗಿ ಫೇಸ್’ಬುಕ್ ಮಾಲಕ ಸಂಸ್ಥೆ ಮೆಟಾ ಪ್ರಕಟಿಸಿದೆ.

ಎಲಾನ್ ಮಸ್ಕ್ ಒಡೆತನದಲ್ಲಿರುವ ಟ್ವಿಟ್ಟರ್ ಕಂಪೆನಿ ಹಲವು ಸಿಬ್ಬಂದಿಯನ್ನು ವಜಾಗೊಳಿಸಿದ್ದ ಬೆನ್ನಲ್ಲೇ ಮೆಟಾ ಸಂಸ್ಥೆ ಸಹ ತನ್ನ ಅತ್ಯಧಿಕ ಸಿಬ್ಬಂದಿಯನ್ನು ವಜಾಗೊಳಿಸಲು ಮುಂದಾಗಿದದ್ದು ಜಾಗತಿಕ ಗಮನ ಸೆಳೆದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮೆಟಾ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ಸ್ ಝುಕರ್’ಬರ್ಗ್ ಬ್ಲಾಗ್, ಮೆಟಾ ಇತಿಹಾಸದಲ್ಲಿಯೇ ನಾವು ಜಾರಿಗೆ ತಂದ ಬೇಸರದ, ಪ್ರಯಾಸದಾಯಕ ಬದಲಾವಣೆಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದೇವೆ. ಆರ್ಥಿಕ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ಮೆಟಾ ತಂಡದ ಗಾತ್ರವನ್ನು ಶೇಕಡಾ 13 ರಷ್ಟು ಕಡಿತಗೊಳಿಸಲು ತೀರ್ಮಾನಿಸಿದ್ದೇವೆ. ಈ ತಂಡದಲ್ಲಿ ಹಲವು ಪ್ರತಿಭಾವಂತ ಸಿಬ್ಬಂದಿಯ ಪೈಕಿ ಸುಮಾರು 11 ಸಾವಿರಕ್ಕೂ ಅಧಿಕ ಜನರನ್ನು ಕರ್ತವ್ಯದಿಂದ ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ಬ್ಲಾಗ್ ಪೋಸ್ಟ್’ನಲ್ಲಿ ತಿಳಿಸಿದ್ದಾರೆ.

ಸಿಬ್ಬಂದಿಯನ್ನು ವಜಾಗೊಳಿಸುವ ತೀರ್ಮಾನದ ಸಂಪೂರ್ಣ ಹೊಣೆಯನ್ನು ತಾನು ಹೊತ್ತುಕೊಳ್ಳುವುದಾಗಿ ಝುಕರ್’ಬರ್ಗ್ ತಿಳಿಸಿದ್ದು, ಈ ಸಂಬಂಧ ಸಿಬ್ಬಂದಿಯ ಬಳಿ ಕ್ಷಮೆಯಾಚಿಸಿದ್ದಾರೆ.

Join Whatsapp
Exit mobile version