Home ಟಾಪ್ ಸುದ್ದಿಗಳು ಟ್ರಂಪ್‌ ಫೇಸ್‌ ಬುಕ್‌ ಖಾತೆ 2 ವರ್ಷ ಅಮಾನತು | ಅಮೆರಿಕ ಮಾಜಿ ಅಧ್ಯಕ್ಷನ ಆಕ್ರೋಶ

ಟ್ರಂಪ್‌ ಫೇಸ್‌ ಬುಕ್‌ ಖಾತೆ 2 ವರ್ಷ ಅಮಾನತು | ಅಮೆರಿಕ ಮಾಜಿ ಅಧ್ಯಕ್ಷನ ಆಕ್ರೋಶ

ಸ್ಯಾನ್‌ ಫ್ರಾನ್ಸಿಸ್ಕೊ : ಅಮೆರಿಕದ ಕ್ಯಾಪಿಟಲ್‌ ಭವನದ ಮೇಲೆ ಜ.6ರಂದು ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆ ಫೇಸ್‌ ಬುಕ್‌ 2 ವರ್ಷ ನಿಷೇಧ ಹೇರಿದೆ. 2 ವರ್ಷಗಳ ವರೆಗೆ ಟ್ರಂಪ್‌ ಅವರ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಫೇಸ್‌ ಬುಕ್‌ ತಿಳಿಸಿದೆ.

2 ವರ್ಷಗಳು ಮುಗಿದ ಬಳಿಕವೂ ಈ ಅಮಾನತು ತೆರವುಗೊಳ್ಳುವುದು ಖಚಿತವಿಲ್ಲ. ಆ ಬಳಿಕ ಹಲವು ಅಂಶಗಳನ್ನೊಳಗೊಂಡು ಮೌಲ್ಯಮಾಪನ ಮಾಡಿ ಅಮಾನತು ತೆರವುಗೊಳಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಫೇಸ್‌ ಬುಕ್‌ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್‌, ಇದು ನನಗೆ ಮಾಡಿರುವ ಅವಮಾನ ಎಂದು ಕಿಡಿಗಾರಿದ್ದಾರೆ. ಈ ರೀತಿ ಸೆನ್ಸಾರ್‌ ಮಾಡಲು ಮತ್ತು ನಮ್ಮನ್ನು ಮೌನವಾಗಿಸಲು ಅವರಿಗೆ ಅವಕಾಶ ನೀಡಬಾರದು. ಅಂತಿಮವಾಗಿ ನಾವೇ ಗೆಲ್ಲುತ್ತೇವೆ. ನಮ್ಮ ದೇಶವು ಈ ದುರುಪಯೋಗವನ್ನು ಸಹಿಸಲು ಸಾಧ್ಯವಿಲ್ಲ ಎಂದು ಟ್ರಂಪ್‌ ಅವರ ಹೇಳಿಕೆಯಲ್ಲಿ ತಿಳಿಸಲಾಗಿದೆ.

Join Whatsapp
Exit mobile version