Home ಟಾಪ್ ಸುದ್ದಿಗಳು ‘INDIA’ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ಎಂದ ಮಮತಾ: ಬೇಕಿಲ್ಲ ಎಂದ ಕಾಂಗ್ರೆಸ್

‘INDIA’ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ಎಂದ ಮಮತಾ: ಬೇಕಿಲ್ಲ ಎಂದ ಕಾಂಗ್ರೆಸ್

‘INDIA’ ಮೈತ್ರಿಕೂಟದಿಂದ ದೂರ ಸರಿದು ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈಗ ಯುಟರ್ನ್‌ ಹೊಡೆದಿದ್ದಾರೆ. ದೇಶದ ಅರ್ಧಕ್ಕಿಂತಲೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ಮುಗಿದ ಬಳಿಕ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ಕೊಡೊದಾಗಿ ಹೇಳಿದ್ದಾರೆ.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುದ ಅವರು, ಕೇಂದ್ರದಲ್ಲಿ INDIA ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ತಮ್ಮ TMC ಪಕ್ಷ ಬಾಹ್ಯ ಬೆಂಬಲ ಕೊಡುತ್ತದೆ ಎಂದು ಹೇಳಿದ್ದಾರೆ. ಸರ್ಕಾರದ ಭಾಗವಾಗದೇ ಸಂಸತ್‌ನಲ್ಲಿ ಕೇವಲ ಮತ ಎಣಿಕೆ ವಿಚಾರ ಬಂದಾಗ ಸರ್ಕಾರದ ಪರ ಮತ ಹಾಕೋದನ್ನು ಬಾಹ್ಯ ಬೆಂಬಲ ಎನ್ನಲಾಗುತ್ತದೆ. INDIA ಕೂಟಕ್ಕೆ ಆ ರೀತಿಯ ಬೆಂಬಲ ಕೊಡೋದಾಗಿ ದೀದಿ ಹೇಳಿದ್ದಾರೆ.

ಆದರೆ ಬಂಗಾಳದಲ್ಲಿ ಕಾಂಗ್ರೆಸ್‌ ಮತ್ತು CPM ನಮ್ಮ ಪ್ರತಿಸ್ಪರ್ಧಿಗಳು ಎಂದೂ ಮಮತಾ ಹೇಳಿದ್ದಾರೆ. ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಇದಕ್ಕೆ ಪ್ರತಿಕ್ರಿಯಿಸಿದ್ದು, ಬೇಕಿಲ್ಲ ಅವರ ಬೆಂಬಲ. ನನಗೆ ಮಮತಾ ಅವರ ಮೇಲೆ ನಂಬಿಕೆಯೇ ಇಲ್ಲ. ಅವರು ನಮ್ಮ ಮೈತ್ರಿಕೂಟ ಬಿಟ್ಟು ಹೊರ ಓಡಿದ್ದಾರೆ. ಲೋಕಸಭೆ ಎಲೆಕ್ಷನ್‌ನಲ್ಲಿ ಬಿಜೆಪಿ ಗೆದ್ದರೆ ಮಮತಾ ಅವರ ಒಟ್ಟಿಗೆ ಹೋಗ್ಬಹುದು. ಮಮತಾ ಅವರು INDIA ಮೈತ್ರಿಕೂಟವನ್ನು ಒಡೆದಿರೊದನ್ನ ಎಲ್ಲರೂ ನೋಡಿದ್ದಾರೆ ಎಂದು ಹೇಳಿದ್ದಾರೆ.

Join Whatsapp
Exit mobile version