Home ಟಾಪ್ ಸುದ್ದಿಗಳು ಚುನಾವಣೆಯ ಮುನ್ನಾ ದಿನ ಸ್ಫೋಟ: ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಮೃತ

ಚುನಾವಣೆಯ ಮುನ್ನಾ ದಿನ ಸ್ಫೋಟ: ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಮೃತ

ಜಾರ್ಖಂಡ್: ಚುನಾವಣೆಗೆ ಒಂದು ದಿನ ಮೂದಲು ಜಾರ್ಖಂಡ್‌ನ ಪಲಮು ಎಂಬಲ್ಲಿ ಸ್ಫೋಟವೊಂದು ನಡೆದಿದ್ದು, ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯ ರಾಜಧಾನಿ ರಾಂಚಿಯಿಂದ 190 ಕಿ.ಮೀ ದೂರದಲ್ಲಿರುವ ಮನತು ಪೊಲೀಸ್ ಠಾಣೆ ಪ್ರದೇಶದ ಸ್ಕ್ರ್ಯಾಪ್ ಡೀಲರ್ ಸ್ಥಳದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಪಲಮು ಸೇರಿದಂತೆ ನಾಲ್ಕು ಸ್ಥಾನಗಳಿಗೆ ಲೋಕಸಭಾ ಚುನಾವಣೆಯ ಮುನ್ನಾದಿನದಂದು ಈ ಘಟನೆ ನಡೆದಿರೋದು ಗಮನಾರ್ಹವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಬಾಂಬ್ ಸ್ಫೋಟದ ಸಾಧ್ಯತೆ ಸೇರಿದಂತೆ ಎಲ್ಲಾ ಕೋನಗಳಿಂದ ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version