Home ಟಾಪ್ ಸುದ್ದಿಗಳು ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ: ಓರ್ವ ವಶಕ್ಕೆ

ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ: ಓರ್ವ ವಶಕ್ಕೆ

ಟೊಕಿಯೋ: ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ ಅವರು ಭಾಷಣ ಮಾಡುತ್ತಿದ್ದ ವೇಳೆ ಹತ್ತಿರದಲ್ಲೇ ಸ್ಫೋಟವಾಗಿದ್ದು, ಅವರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.


ಫ್ಯೂಮಿಯೋ ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.


ಕ್ಯೂಡೋ ನ್ಯೂಸ್ ಏಜೆನ್ಸಿ ಸೇರಿದಂತೆ ಹಲವು ವರದಿಗಳ ಪ್ರಕಾರ, ಸ್ಥಳದಲ್ಲಿ ಹೊಗೆ ಬಾಂಬ್ ಎಸೆಯಲಾಗಿದೆ. ಆದರೆ, ಯಾವುದೇ ಗಾಯಗಳು ಅಥವಾ ಹಾನಿಯ ತಕ್ಷಣದ ಲಕ್ಷಣಗಳು ಕಂಡುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಜಪಾನ್ನ ವಕಯಾಮಾದಲ್ಲಿ ಕಿಶಿಡಾ ಭಾಷಣ ಮಾಡಲು ಬಂದಿದ್ದ ಸ್ಥಳದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

Join Whatsapp
Exit mobile version