Home ಟಾಪ್ ಸುದ್ದಿಗಳು ತಮಿಳುನಾಡು: ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ | ಮೂವರು ಸಾವು

ತಮಿಳುನಾಡು: ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ | ಮೂವರು ಸಾವು

ಚೆನ್ನೈ:  ಅಕ್ರಮವಾಗಿ ಪಟಾಕಿ ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ ಸ್ಫೋಟಗೊಂಡು ಮಗು ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈಯಿಂದ 500 ಕಿಲೋ ಮೀಟರ್ ದೂರದಲ್ಲಿರುವ ವಿರುಧುನಗರ್ ಜಿಲ್ಲೆಯ ಶಿವಕಾಶಿ ಸಮೀಪದ ಥಾಯಿಲ್ ಪಟ್ಟಿಯ ಪಟಾಕಿ ತಯಾರಿಕಾ ಘಟಕದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ. ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು ಎಂದು ತಿಳಿದುಬಂದಿದೆ.

ತಮಿಳುನಾಡಿನಲ್ಲಿ ಶಿವಕಾಶಿಯು ಪಟಾಕಿ ತಯಾರಿಕೆಯ ಅತೀ ದೊಡ್ಡ ಉತ್ಪಾದನಾ ಕೇಂದ್ರವಾಗಿದ್ದು, ಇಲ್ಲಿಂದ ದೇಶದಾದ್ಯಂತ ಶೇ.90-95ರಷ್ಟು ಪಟಾಕಿ ಸರಬರಾಜು ಮಾಡಲಾಗುತ್ತದೆ.

Join Whatsapp
Exit mobile version