Home ಕರಾವಳಿ ದ.ಕ. ಜಿಲ್ಲೆಯ ಮುಸ್ಲಿಂ ನಾಯಕರೊಂದಿಗೆ ಮುಸ್ಲಿಂ ಜಸ್ಟೀಸ್ ಫೋರಂ ನೇತೃತ್ವದಲ್ಲಿ ವಿಚಾರ ವಿನಿಮಯ

ದ.ಕ. ಜಿಲ್ಲೆಯ ಮುಸ್ಲಿಂ ನಾಯಕರೊಂದಿಗೆ ಮುಸ್ಲಿಂ ಜಸ್ಟೀಸ್ ಫೋರಂ ನೇತೃತ್ವದಲ್ಲಿ ವಿಚಾರ ವಿನಿಮಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ನಾಯಕರೊಂದಿಗೆ ಭವಿಷ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯ ಎಂಬ ವಿಚಾರದ ಬಗ್ಗೆ ವಿಚಾರ ವಿನಿಮಯ ಶನಿವಾರ ಮಂಗಳೂರಿನ ಕಂಕನಾಡಿಯಲ್ಲಿರುವ ಜಮೀಯ್ಯತುಲ್ ಫಲಾಹ್ ಹಾಲ್‌’ನಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ನಾಡಿನ ಮುಸ್ಲಿಂ ಸಮಾಜದ ಗಣ್ಯರು ಭಾಗವಹಿಸಿ, ಸಮುದಾಯದ ಇತ್ತೀಚಿನ ಸಮಸ್ಯೆಗಳು ಮತ್ತು ಅದನ್ನು ಪರಿಹರಿಸುವ ಹಾಗೂ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಬಾರದ ಹಾಗೆ ಎಚ್ಚೆತ್ತುಕೊಳ್ಳುವುದು ಹೇಗೆ ಮತ್ತು ಅದಕ್ಕೆ ಬೇಕಾದ ಶಾಶ್ವತ ಪರಿಹಾರದ ಬಗ್ಗೆ ವಿಚಾರ ವಿನಿಮಯವನ್ನು ಮಾಡಿದರು.

ಈ ಕಾರ್ಯಕ್ರಮದಲ್ಲಿ ಜಮೀಯ್ಯತುಲ್ ಫಲಾಹ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ., ವಿಟ್ಲ ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಎಂ.ಎಸ್.ಮುಹಮ್ಮದ್, ಸಾಮಾಜಿಕ ಕಾರ್ಯಕರ್ತರಾದ ಸುಹೈಲ್ ಕಂದಕ್, ಡಿ.ಎಂ. ಅಸ್ಲಂ, ಇಬ್ರಾಹೀಮ್ ಬಡ್ಡೂರು, ಅಶ್ರಫ್ ಕರಾವಳಿ, ಜಬ್ಬಾರ್, ಬಾಷಾ ಮುಸ್ತಾಕ್ ಭಾಗವಹಿಸಿ ಜಿಲ್ಲೆಯ ಇನ್ನಷ್ಟು ನಾಯಕರನ್ನು ಒಂದೇ ವೇದಿಕೆಯಲ್ಲಿ ತಂದು ಸಮುದಾಯದ ಹಿತಕ್ಕಾಗಿ ದೂರದ ಯೋಜನೆ ರೂಪಿಸುವ ಬಗ್ಗೆ ಸಲಹೆ ನೀಡಿದರು.

ಮುಸ್ಲಿಂ ಜಸ್ಟೀಸ್ ಫೋರಂನ ಸ್ಥಾಪಕಾಧ್ಯಕ್ಷ ರಫೀಯುದ್ದೀನ್ ಕುದ್ರೋಳಿ, ಅಧ್ಯಕ್ಷ ಇರ್ಷಾದ್ ಯು.ಟಿ., ಉಪಾಧ್ಯಕ್ಷರಾದ ಅಲಿ ಹಸನ್ ಮತ್ತು ಇಕ್ಬಾಲ್ ಸಾಮಾನಿಗೆ, ಕಾರ್ಯದರ್ಶಿಗಳಾದ ವಹಾಬ್ ಕುದ್ರೋಳಿ, ಸಲಾಂ ಉಚ್ಚಿಲ್, ವಕ್ತಾರ ಹನೀಫ್ ಖಾನ್ ಕೊಡಾಜೆ, ಕಾರ್ಯಕಾರಿ ಸಮಿತಿಯ ಸದಸ್ಯರಾದ ನವಾಝ್ ಉಳ್ಳಾಲ್, ಆಸೀಫ್ ಬೆಂಗರೆ, ಇದ್ದಿಕುಂಜ, ಇಮ್ರಾನ್ ಬಂದರ್ ಮತ್ತು ಹಾಶೀರ್ ಪೆರಿಮಾರ್ ಉಪಸ್ಥಿತರಿದ್ದರು.

Join Whatsapp
Exit mobile version