Home ಟಾಪ್ ಸುದ್ದಿಗಳು ಇರಾನ್ ಮೇಲೆ ದಾಳಿಗೂ ಮುನ್ನ ಇಸ್ರೇಲ್ ಎರಡು ಬಾರಿ ಯೋಚಿಸಬೇಕು ಎಂದ ಮಾಜಿ ಮೊಸಾದ್ ಮುಖ್ಯಸ್ಥ

ಇರಾನ್ ಮೇಲೆ ದಾಳಿಗೂ ಮುನ್ನ ಇಸ್ರೇಲ್ ಎರಡು ಬಾರಿ ಯೋಚಿಸಬೇಕು ಎಂದ ಮಾಜಿ ಮೊಸಾದ್ ಮುಖ್ಯಸ್ಥ

ಟೆಲ್ ಅವೀವ್: ಇರಾನ್ ನ ಪರಮಾಣು ಕೇಂದ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಸಾಧ್ಯವಾಗದಿದ್ದರೆ ದಾಳಿ ನಡೆಸದೇ ಇರುವುದು ಒಳಿತು ಎಂದು ಮೊಸಾದ್ (ಇಸ್ರೇಲ್ ಮಿಲಿಟರಿ ಗುಪ್ತಚರ) ಮಾಜಿ ಮುಖ್ಯಸ್ಥ ತಮಿರ್ ಪಾರ್ಡೊ ಇಸ್ರೇಲ್ ಗೆ ಸಲಹೆ ನೀಡಿದ್ದಾರೆ.

ಅವರು ಹರ್’ಝಿಲಿಯಾದಲ್ಲಿ ರೀಚ್ಮನ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಫಾರ್ ಪಾಲಿಸಿ ಅಂಡ್ ಸ್ಟ್ರಾಟಜಿ ಕಾನ್ಫರೆನ್ಸ್ ನಲ್ಲಿ ಮಾತನಾಡುತ್ತಿದ್ದರು.

ಇರಾಕ್ ಮತ್ತು ಸಿರಿಯಾದ ಮೇಲೆ ನಡೆಸಿದ ವೈಮಾನಿಕ ದಾಳಿಗಿಂತ ಇರಾನ್‌ ನ ಪರಮಾಣು ಕೇಂದ್ರಗಳ ವಿರುದ್ಧ ನಡೆಸುವ ಮಿಲಿಟರಿ ದಾಳಿಯು ಹೆಚ್ಚು ಕಠಿಣವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

‘ಆಪರೇಷನ್ ಒಪೆರಾ’ದಂತೆ (1981 ರಲ್ಲಿ ಇರಾಕ್ ಪರಮಾಣು ಕೇಂದ್ರದ ವಿರುದ್ಧದ ದಾಳಿ) ಈ ವ್ಯವಹಾರವನ್ನು ಕೊನೆಗೊಳಿಸಲು ಸಾಧ್ಯವಾಗದಿದ್ದರೆ, ಇಸ್ರೇಲ್ ಎರಡು ಬಾರಿ ಯೋಚಿಸಿ ಮುನ್ನಡೆಯುವುದು ಒಳಿತು” ಎಂದು ಪಾರ್ಡೊ ಹೇಳಿದರು.

Join Whatsapp
Exit mobile version