Home ಟಾಪ್ ಸುದ್ದಿಗಳು ಪೆನ್ ಡ್ರೈವ್ ಕೇಸ್ ನಲ್ಲಿ ಹಾಸನ ಬಿಜೆಪಿ ಮಾಜಿ ಶಾಸಕನ ಕೈವಾಡವಿದೆ: ಕಾಂಗ್ರೆಸ್ ಶಾಸಕ

ಪೆನ್ ಡ್ರೈವ್ ಕೇಸ್ ನಲ್ಲಿ ಹಾಸನ ಬಿಜೆಪಿ ಮಾಜಿ ಶಾಸಕನ ಕೈವಾಡವಿದೆ: ಕಾಂಗ್ರೆಸ್ ಶಾಸಕ

ಮಂಡ್ಯ: ಪೆನ್ ಡ್ರೈವ್ ಕೇಸ್ ನಲ್ಲಿ ರಾಜ್ಯ ಮಟ್ಟದಲ್ಲಿ ಬಿಜೆಪಿಯ ಅತ್ಯುತ್ತಮ ಸ್ಥಾನದಲ್ಲಿ ಕುಳಿತಿರುವ ನಾಯಕ, ಹಾಸನದ ಮಾಜಿ ಶಾಸಕನ ಕೈವಾಡ ಇದೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಹೊಸ ಬಾಂಬ್ ಸಿಡಿಸಿದ್ದಾರೆ.


ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ಕೈವಾಡ ಎಂಬ ಆರೋಪದ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಅವರು, ಡಿಕೆಶಿ ಮಾಡ್ಸಿದ್ದಾರೆ ಎನ್ನುವುದರ ಕುರಿತು ದಾಖಲೆ ಕೊಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜ್ವಲ್ ರೇವಣ್ಣ ಸ್ಟೇ ತಂದಾಗ ಇದೇ ದೇವರಾಜೇಗೌಡ ಹಾಸನದಲ್ಲಿ ನಿನ್ನ ಸ್ಟೇ ವೆಕಾಟ್ ಇದೆ, ಎಲ್ಲವನ್ನ ಬಿಡ್ತಿನಿ ಎಂದು ಹೇಳಿದ್ದಾರೆ. ಒಂದು ತಿಂಗಳ ದೇವರಾಜೇಗೌಡ ಸ್ಟೇಟ್ಮೇಂಟ್ ನೋಡಿ. ಇದರಲ್ಲಿ ಕೈವಾಡವಿರುವ ಮಾಜಿ ಶಾಸಕನೇ ಕೋಟ್ಯಾಂತರ ರೂ. ಹೂಡಿಕೆ ಮಾಡಿ ಪೆನ್ ಡ್ರೈ ಹಂಚಿದ್ದಾರೆ ಎಂದರು.

Join Whatsapp
Exit mobile version