Home ಟಾಪ್ ಸುದ್ದಿಗಳು ದೆಹಲಿ ಪಾಲಿಕೆ ಚುನಾವಣೆ: ಟಿಕೆಟ್ ಸಿಕ್ಕಿಲ್ಲವೆಂದು ಮಾಜಿ ಕಾರ್ಪೊರೇಟರ್ ಮಾಡಿದ್ದೇನು?

ದೆಹಲಿ ಪಾಲಿಕೆ ಚುನಾವಣೆ: ಟಿಕೆಟ್ ಸಿಕ್ಕಿಲ್ಲವೆಂದು ಮಾಜಿ ಕಾರ್ಪೊರೇಟರ್ ಮಾಡಿದ್ದೇನು?

ಹೊಸದಿಲ್ಲಿ: ಡಿ.4ರಂದು ದೆಹಲಿ ಪಾಲಿಕೆ ಚುನಾವಣೆ ನಡೆಯಲಿದ್ದು, ಆಮ್ ಆದ್ಮಿ ಪಕ್ಷದಿಂದ 117 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ತನಗೆ ಪಕ್ಷದ ಟಿಕೆಟ್ ಸಿಕ್ಕಿಲ್ಲವೆಂದು ಮಾಜಿ ಕಾರ್ಪೊರೇಟರ್ ಹೈಟೆನ್ಶನ್ ವಿದ್ಯುತ್ ತಂತಿ ಹಾದುಹೋಗುವ ಟವರ್ ಏರಿ ಕುಳಿತ ಘಟನೆ ನಡೆದಿದೆ.

ಹೈಟೆನ್ಶನ್ ವಿದ್ಯುತ್ ಹರಿಯುವ ಟವರ್ ಆಗಿದ್ದರಿಂದ ವಿದ್ಯುತ್ ಸಂಪರ್ಕವನ್ನೂ ಕಡಿತ ಮಾಡಲಾಗಿತ್ತು. ನಂತರ ಪೊಲೀಸರು, ಆಮ್ ಆದ್ಮಿ ಪಕ್ಷದ ಪ್ರತಿನಿಧಿಗಳು ಆಗಮಿಸಿ ಹಸೀಬುಲ್ ನನ್ನು ಮನವೊಲಿಸಿ ಕೆಳಕ್ಕೆ ಇಳಿಸಿದ್ದಾರೆ.

ಟವರ್ ಏರಿ ಕುಳಿತ ಮಾಜಿ ಕಾರ್ಪೋರೇಟರ್ ಹಸೀಬ್ ಉಲ್ ಹಸನ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ನಿರಾಕರಿಸಲಾಗಿದೆ. ಅಲ್ಲದೆ, ತನ್ನ ಒರಿಜಿನಲ್ ದಾಖಲೆ ಪ್ರತಿಗಳನ್ನು ತೆಗೆದಿಟ್ಟು ಸ್ವತಂತ್ರ ಸ್ಪರ್ಧೆಗೂ ಅವಕಾಶ ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ಹಸೀಬ್ ಗಂಭೀರ ಆರೋಪ ಮಾಡಿದ್ದು,  ನಾಯಕರಾದ ಆತಿಷಿ, ದುರ್ಗೇಶ್ ಪಾಠಕ್ ಮತ್ತು ಸಂಜಯ್ ಸಿಂಗ್ ಟಿಕೆಟ್ ನೀಡಬೇಕಾದರೆ ಮೂರು ಕೋಟಿ ರೂಪಾಯಿ ಹಣ ಕೇಳಿದ್ದಾರೆ. ನಾನು ಕೊಡಲು ಒಪ್ಪದೇ ಇದ್ದ ಕಾರಣ ನನ್ನ ಬದಲಿಗೆ ದೀಪು ಚೌಧರಿಯಿಂದ ಮೂರು ಕೋಟಿ ರೂಪಾಯಿ ಹಣ ಪಡೆದು ಟಿಕೆಟ್ ನೀಡಿದ್ದಾರೆ ಎಂದು ಹಸೀಬುಲ್ ಹಸನ್ ಆರೋಪಿಸಿದ್ದಾರೆ.

Join Whatsapp
Exit mobile version