ಕಾಸರಗೋಡು: ಜಿಲ್ಲೆಯಲ್ಲಿ ಎಲ್ಲಾ ಚುನಾವಣಾ ಪ್ರಕ್ರಿಯೆಗಳು ಪಾರದರ್ಶಕವಾಗಿದ್ದು, ಇವಿಎಂ ವಿವಿಪ್ಯಾಟ್ ಚಟುವಟಿಕೆಗಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಹೇಳಿದರು.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಸರಗೋಡು ಲೋಕಸಭಾ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳ ಸಮ್ಮುಖದಲ್ಲಿ ತಮ್ಮ ಏಜೆಂಟರಿಗೆ ಸೂಚನೆ ನೀಡಿ ಪತ್ರಿಕಾ ಪ್ರಕಟಣೆ ಸಹಿತ ಪ್ರಕ್ರಿಯೆ ನಡೆಸಲಾಗಿತ್ತು. ಇಬ್ಬರು ಅಭ್ಯರ್ಥಿಗಳ ಏಜೆಂಟರು ನಿರ್ದಿಷ್ಟ ಅಭ್ಯರ್ಥಿಯ ಚೀಟಿ ಬರುತ್ತಿದೆ ಎಂದು ತಿಳಿಸಿದ ನಂತರ ವಿವಿ ಪ್ಯಾಟ್ ಮತದಾನ ಮಾಡದೆ, ತಕ್ಷಣವೇ ಪರಿಶೀಲಿಸಿ ತಪ್ಪು ತಿಳಿವಳಿಕೆ ಬಗ್ಗೆ ಸಹಾಯಕ ಚುನಾವಣಾಧಿಕಾರಿ ಹಾಗೂ ಬಿಎಚ್ ಇಎಲ್ ಎಂಜಿನಿಯರ್ ಗಳು ಅಭ್ಯರ್ಥಿಗಳು ಹಾಗೂ ಏಜೆಂಟರಿಗೆ ಮನವರಿಕೆ ಮಾಡಿದರು.
ಅನುಮಾನಗೊಂಡ ವಿವಿ
ಪ್ಯಾಟ್ ಅಣಕು ಮತದಾನ ನಡೆಸಿ ಸಾವಿರ ಮತಗಳನ್ನು ದಾಖಲಿಸಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಅಭ್ಯರ್ಥಿಯ ಏಜೆಂಟರು ಪ್ರಮಾಣ ಪತ್ರಕ್ಕೆ ಸಹಿ ಹಾಕಿದ್ದಾರೆ. ಅದರ ನಂತರ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.ಕಾಸರಗೋಡು ಜಿಲ್ಲೆಯ ಚುನಾವಣಾ ಕಾರ್ಯಚಟುವಟಿಕೆಗಳು ಹಾಗೂ ಇವಿಎಂ ವಿವಿಪ್ಯಾಟ್ ಕಾರ್ಯಾರಂಭದ ಬಗ್ಗೆ ಯಾರಿಗೂ ಅನುಮಾನ, ಆತಂಕ ಬೇಡ ಎಂದರು.ಕಾರ್ಯಾಚರಣೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅಗತ್ಯ ಬಿದ್ದರೆ ಪರಿಶೀಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.