Home ಟಾಪ್ ಸುದ್ದಿಗಳು ಎರಡನೇ ಕನ್ನಡಿಗ ಪ್ರಧಾನ ಮಂತ್ರಿಯಾದರೆ ಎಲ್ಲರಿಗೂ ಸಂತೋಷವೇ: ಜಿ. ಪರಮೇಶ್ವರ್

ಎರಡನೇ ಕನ್ನಡಿಗ ಪ್ರಧಾನ ಮಂತ್ರಿಯಾದರೆ ಎಲ್ಲರಿಗೂ ಸಂತೋಷವೇ: ಜಿ. ಪರಮೇಶ್ವರ್

ಬೆಂಗಳೂರು: ಎರಡನೇ ಕನ್ನಡಿಗ ಪ್ರಧಾನ ಮಂತ್ರಿಯಾದರೆ ಎಲ್ಲರಿಗೂ ಸಂತೋಷವೇ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಜಿ ಪರಮೇಶ್ವರ್, ಆ ವಿಚಾರ ತನಗೇನೂ ತಿಳಿಯದು ಎಂದು ಹೇಳಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಅವರೇ ಆಗಿರುವುದರಿಂದ ಸ್ಪರ್ಧಿಸಬಯಸಿದಲ್ಲಿ ತಾವೆಲ್ಲ ಅವರ ಗೆಲುವಿಗೆ ಶ್ರಮಿಸಬೇಕಾಗುತ್ತದೆ ಎಂದರು. ಅವರು ಪ್ರಧಾನ ಮಂತ್ರಿಯಾದರೆ, ಹುದ್ದೆಯನ್ನು ಅಲಂಕರಿಸುವ ಎರಡನೇ ಕನ್ನಡಿಗ ಅನಿಸಿಕೊಳ್ಳುತ್ತಾರೆ, ಅದಕ್ಕಿಂತ ಹೆಚ್ಚಿನ ಸಂತೋಷ ಮತ್ತೇನಿದೆ ಎಂದು ಹೇಳಿದ್ದಾರೆ.

Join Whatsapp
Exit mobile version