Home ಟಾಪ್ ಸುದ್ದಿಗಳು ಉತ್ತರ ಪ್ರದೇಶದಂತೆ ಎಲ್ಲರೂ ಬಿಜೆಪಿಯಿಂದ ಹೊರಗೆ ಹೋಗ್ತಾರೆ: ಯತ್ನಾಳ್

ಉತ್ತರ ಪ್ರದೇಶದಂತೆ ಎಲ್ಲರೂ ಬಿಜೆಪಿಯಿಂದ ಹೊರಗೆ ಹೋಗ್ತಾರೆ: ಯತ್ನಾಳ್

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ವಲಸಿಗರ ವಿರುದ್ಧ ಗಂಭೀರ ಆರೋಪ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹೊರಗಿನಿಂದ ಬಂದ ಕೆಲವರಿಗೆ ಪಕ್ಷ ನಿಷ್ಠೆ ಇಲ್ಲ ಎಂದಿದ್ದಾರೆ.

ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಉತ್ತರಪ್ರದೇಶದಂತೆ ಎಲ್ಲರೂ ಹೊರಗೆ ಹೋಗುತ್ತಾರೆ.ಹಲವರು ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಅವರನ್ನು ಭೇಟಿಯಾಗಿ ಹಲವರು ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಹೊರಗಿನಿಂದ ಬಂದ ಎಲ್ಲರಿಗೂ ಪಕ್ಷ ನಿಷ್ಠೆ ಇಲ್ಲ ಎನ್ನಲ್ಲ, ಕೆಲವರಿಗೆ ಪಕ್ಷ ನಿಷ್ಠೆ ಇಲ್ಲ. ಕೆಲವರು ಪಕ್ಷ ತೊರೆಯುವ ನಿಟ್ಟಿನಲ್ಲಿ ಮುಂದಾಗಿದ್ದಾರೆ ಎಂದು ಹೇಳಿದರು. ಸಚಿವ ಸಂಪುಟ ವಿಸ್ತರಣೆ ಮಾಡುವುದಾದರೆ 15 ದಿನಗಳಲ್ಲಿ ಮಾಡಲಿ ಆ ನಂತರ ಮಾಡಿದರೆ ಏನು ಉಪಯೋಗವಿಲ್ಲ. ಸಚಿವರಾದವರು ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

Join Whatsapp
Exit mobile version