Home ಟಾಪ್ ಸುದ್ದಿಗಳು ಬಿಜೆಪಿಗೆ ಬೆಂಬಲ ನೀಡುವ ಮೂಲಕ ಒಗ್ಗಟ್ಟು ಮುರಿಯಲು ಯತ್ನಿಸುವ ಪ್ರತಿ ಪಕ್ಷಗಳು: ಮಾರ್ಗರೆಟ್‌ ಆಳ್ವ

ಬಿಜೆಪಿಗೆ ಬೆಂಬಲ ನೀಡುವ ಮೂಲಕ ಒಗ್ಗಟ್ಟು ಮುರಿಯಲು ಯತ್ನಿಸುವ ಪ್ರತಿ ಪಕ್ಷಗಳು: ಮಾರ್ಗರೆಟ್‌ ಆಳ್ವ

ಹೊಸದಿಲ್ಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಪೈಕಿ ಕೆಲವು ಪಕ್ಷಗಳು ಬಿಜೆಪಿಯನ್ನು ಬೆಂಬಲಿಸಿದ್ದು ದುರದೃಷ್ಟಕರ ಎಂದು ಕಾಂಗ್ರೆಸ್‌ ನಾಯಕಿ ಮಾರ್ಗರೆಟ್‌ ಆಳ್ವ ಹೇಳಿದ್ದಾರೆ.


ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ತಮ್ಮ ಪರವಾಗಿ ಪ್ರಚಾರ ಮಾಡಿದ ಬೆಂಬಲಿಗರಿಗೆ ಧನ್ಯವಾದ ಸಮರ್ಪಿಸಿದರು.

ನೂತನ ಉಪರಾಷ್ಟ್ರಪತಿಯಾಗಿ ಚುನಾಯಿತರಾದ ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನಕರ್‌ ಅವರಿಗೆ ಅಭಿನಂದನೆ ಸಲ್ಲಿಸಿದರು. ಜೊತೆಗೆ ತಮ್ಮ ಪರವಾಗಿ ಮತ ಚಲಾಯಿಸಿದ ಎಲ್ಲ ಪ್ರತಿಪಕ್ಷಗಳಿಗೆ ಮತ್ತು ಸಂಸದರಿಗೆ ಧನ್ಯವಾದ ತಿಳಿಸಿದರು.

‘ಈ ಚುನಾವಣೆಯು ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಲು ಸಿಕ್ಕಿದ್ದ ಅವಕಾಶವಾಗಿದ್ದು, ಹಳೆಯದ್ದನ್ನು ಮರೆತು ಪರಸ್ಪರ ಬಾಂಧವ್ಯಗಳನ್ನು ಗಟ್ಟಿಗೊಳಿಸಲು ಸಿಕ್ಕಿದ ಅವಕಾಶವಾಗಿದೆ. ಆದರೆ ಕೆಲವು ಪಕ್ಷಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿದೆ. ಈ ಮೂಲಕ ಪ್ರತಿಪಕ್ಷಗಳ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ಮಾಡಿದ್ದು ವಿಷಾದದ ಸಂಗತಿ’ ಎಂದು ಟ್ವೀಟಿಸಿದ್ದಾರೆ.

Join Whatsapp
Exit mobile version