Home ಟಾಪ್ ಸುದ್ದಿಗಳು ಚುನಾವಣಾ ಪ್ರಚಾರಕ್ಕೆ ಈಶ್ವರಪ್ಪ ಪ್ರಧಾನಿ ಮೋದಿ ಫೋಟೋ ಬಳಸುವಂತಿಲ್ಲ: ಅಶೋಕ್

ಚುನಾವಣಾ ಪ್ರಚಾರಕ್ಕೆ ಈಶ್ವರಪ್ಪ ಪ್ರಧಾನಿ ಮೋದಿ ಫೋಟೋ ಬಳಸುವಂತಿಲ್ಲ: ಅಶೋಕ್

ಬೆಂಗಳೂರು: ಈಶ್ವರಪ್ಪ ಮಾಡುತ್ತಿರುವುದು ತಪ್ಪು, ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಫೋಟೋ ಬಳಸುವಂತಿಲ್ಲ ಎಂದು ಬಿಜೆಪಿ ನಾಯಕ ಅರ್ ಅಶೋಕ್ ಹೇಳಿದ್ದಾರೆ.


ನಗರದಲ್ಲಿಂದು ಪತ್ರಿಕಾಗೋಷ್ಟಿ ನಡೆಸಿ ಮಾತಾಡಿದ ಅವರು, ಈಶ್ವರಪ್ಪ ಮಾಡುತ್ತಿರುವುದು ತಪ್ಪು, ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಫೋಟೋ ಬಳಸುವಂತಿಲ್ಲ, ಅವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದರು. ಸರ್ಕಾರೀ ಕಾರ್ಯಕ್ರಮ ಅಥವಾ ಮದುವೆಯಂಥ ಸಮಾರಂಭಗಳಲ್ಲಿ ಫೋಟೋ ಬಳಸಬಹುದು, ಆದರೆ ಅನಧಿಕೃತವಾಗಿ ಬಳಸುವಂತಿಲ್ಲ, ಚುನಾವಣಾ ಸಂದರ್ಭದಲ್ಲಿ ಕೇವಲ ಬಿಜೆಪಿಗೆ ಮಾತ್ರ ಪ್ರಧಾನಿಯವರ ಫೋಟೋ ಬಳಸುವ ಅವಕಾಶವಿದೆ ಎಂದು ಅಶೋಕ ಹೇಳಿದರು. ಈಶ್ವರಪ್ಪ ಬಿಜೆಪಿ ಸದಸ್ಯರು ಹೌದಾ ಅಥವಾ ಅಲ್ಲವಾ ಅಂತ ಪಕ್ಷ ತೀರ್ಮಾನಿಸುತ್ತದೆಯೇ ಹೊರತು ಅವರಲ್ಲ ಎಂದು ಅಶೋಕ ಹೇಳಿದರು.

Join Whatsapp
Exit mobile version