ಬೆಂಗಳೂರು: ಪದವಿ ಕೋರ್ಸ್‌ಗಳಾದ ಬಿಎ, ಬಿಎಸ್ಸಿ ಹಾಗೂ ಬಿಕಾಂ ಕೋರ್ಸ್‌ಗಳ ಪ್ರವೇಶಕ್ಕೆ ಎಂಟ್ರೆಂಸ್ ಎಕ್ಸಾಮ್ ನಡೆಸುವ ಕುರಿತು ಸಿದ್ದತೆ ನಡೆಸಲಾಗಿದೆ. ಪದವಿ ಪ್ರವೇಶಕ್ಕೂ ರಾಷ್ಟ್ರೀಯ ಪ್ರವೇಶ ಪರೀಕ್ಷೆ ವ್ಯವಸ್ಥೆ ಜಾರಿಯಾಗಲಿದ್ದು, ಈ ನಿರ್ಧಾರಕ್ಕೆ ರಾಜ್ಯದ ಸರ್ಕಾರಿ ವಿವಿಗಳು ಸಮ್ಮತಿ ಸೂಚಿಸಿದೆ.
ಪ್ರವೇಶ ಪರೀಕ್ಷೆಯು ಪದವಿ ಕಾಲೆಜುಗಳಲ್ಲಿ ಜಾರಿಗೊಂಡರೆ ಸರ್ಕಾರಿ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ಪಿಯು ಅಂಕಗಳ ಆಧಾರದ ಮೇಲೆ ಬಿಎ, ಬಿಕಾಂ, ಬಿಎಸ್ಸಿ ಕೋರ್ಸ್‌ಗಳಿಗೆ ಸೀಟು ಪಡೆಯುವ ಹಿಂದಿನ ವ್ಯವಸ್ಥೆ ಕೊನೆಗೊಳ್ಳಲಿದೆ. ಸಿಇಟಿ, ಜೆಇಇ, ನೀಟ್ ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳೇ ತಾಂತ್ರಿಕ / ತಾಂತ್ರಿಕೇತರ ಪದವಿ ಕೋರ್ಸ್‌ಗಳಿಗೆ ಪ್ರವೇಶಕ್ಕೆ ಮುಖ್ಯವಾಗಲಿವೆ.
ತಾಂತ್ರಿಕೇತರ ಪದವಿ ಕೋರ್ಸ್‌ಗಳಿಗೂ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ನಡೆಸುವ ಕುರಿತು ರಾಜ್ಯ ಸರ್ಕಾರಿ ಅಧೀನದ ವಿವಿಧ ವಿವಿ ಕುಲಪತಿಗಳೊಂದಿಗೆ ಯುಜಿಸಿ ಚರ್ಚೆ ನಡೆಸಿದೆ. ಆಯಾ ವಿಶ್ವವಿದ್ಯಾಲಯಗಳು ಡೀನ್, ಅಕಾಡೆಮಿಕ್ ಕೌನ್ಸಿಲ್ ಮಟ್ಟದಲ್ಲಿ ಈ ಪ್ರಸ್ತಾವನೆಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತದೆ ಎನ್ನಲಾಗಿದೆ.