ಇಂಗ್ಲೆಂಡ್ ರಾಜಕೀಯ ಬಿಕ್ಕಟ್ಟು: ಮುಂದಿನ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್, ರಿಷಿ ಸುನಕ್ ಪೈಪೋಟಿ

Prasthutha|

ಇಂಗ್ಲೆಂಡ್: ಪ್ರಧಾನಿ ಹುದ್ದೆಗೆ ಲಿಝ್ ಟ್ರಸ್ ಅವರು ದಿಢೀರ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸದ್ಯ ಬ್ರಿಟನ್’ನಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಮುಂದಿನ ಪ್ರಧಾನಿ ಹುದ್ದೆಗೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

- Advertisement -

ಗುರುವಾರ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ಆರು ವಾರಗಳ ಅಧಿಕಾರವನ್ನು ಲಿಝ್ ಟ್ರಸ್ ಅವರು ಕೊನೆಗೊಳಿಸಿದ್ದರು.

ಸದ್ಯ ಆರು ವರ್ಷಗಳಲ್ಲಿ ಐದನೇ ಬ್ರಿಟಿಷ್ ಪ್ರಧಾನಿ ಆಗಲು ಅಬ್ಬರದ ಪ್ರಚಾರ ನಡೆಯುತ್ತಿದ್ದು, ಮುಂದಿನ ಸೋಮವಾರ ಅಥವಾ ಶುಕ್ರವಾರ ಹೊಸ ಪ್ರಧಾನಿಯನ್ನು ಘೋಷಿಸಲಾಗುತ್ತದೆ.

Join Whatsapp
Exit mobile version