ಬೆಂಗಳೂರು: ವಕ್ಫ್ ಮಂಡಳಿಯಲ್ಲಿ ದಶಕಗಳಿಂದ ಒಂದಲ್ಲ ಒಂದು ಆರೋಪ, ಹಗರಣಗಳು ನಡೆಯುತ್ತಲೇ ಇರುತ್ತದೆ. ಯಾವ ಸರ್ಕಾರವೂ ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಇಂತಹ ಹಗರಣಗಳು ಮುಂದೆ ಎಂದೂ ನಡೆಯದ ಹಾಗೆ ರೋಬಸ್ಟ್ ಸಿಸ್ಟಮ್ (ಯಾರೂ ಭೇದಿಸಲಾಗದ ನಿಯಮಗಳು) ಒಂದನ್ನು ಜಾರಿಗೆ ತನ್ನಿ ಎಂದು ಎಸ್ಡಿಪಿಐ ನಾಯಕ ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವಕ್ಫ್ ಮಂಡಳಿಯಲ್ಲಿ ದಶಕಗಳಿಂದ ಒಂದಲ್ಲ ಒಂದು ಆರೋಪ, ಹಗರಣಗಳು ನಡೆಯುತ್ತಲೇ ಇರುತ್ತದೆ. ಯಾವ ಸರ್ಕಾರವೂ ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಏಕೆಂದರೆ ಬಡ ಮುಸ್ಲಿಮರಿಗೆ ಸೇರಬೇಕಾದ ಹಣವನ್ನು ಪಕ್ಷಾತೀತವಾಗಿ ಎಲ್ಲರೂ ಹಂಚಿ ಮುಕ್ಕಿ ತಿನ್ನುತ್ತಾರೆ. ಈಗ ಮತ್ತೆ ಹಗರಣದ ಆರೋಪಗಳು ಕೇಳಿ ಬರುತ್ತಿವೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸರ್ ನೀವು ಹೇಳುವ ಹಾಗೆ ನಿಮಗೆ ನಿಜವಾಗಿಯೂ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ಇಂತಹ ಹಗರಣಗಳು ಮುಂದೆ ಎಂದೂ ನಡೆಯದ ಹಾಗೆ ರೋಬಸ್ಟ್ ಸಿಸ್ಟಮ್ (ಯಾರೂ ಭೇದಿಸಲಾಗದ ನಿಯಮಗಳು) ಒಂದನ್ನು ಜಾರಿಗೆ ತನ್ನಿ. ಈಗ ಕೇಳಿ ಬಂದಿರುವ ಹಗರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಹೇಳಿದ್ದಾರೆ.