ಯುಎಇ ಎಮಿರೇಟ್ಸ್ ಗ್ರೂಪ್: 500 ಐಟಿ ವೃತ್ತಿಪರರ ನೇಮಕಾತಿಗೆ ನಿರ್ಧಾರ

Prasthutha|

ದುಬೈ: ಯುಎಇ ಮೂಲದ ಎಮಿರೇಟ್ಸ್ ಗ್ರೂಪ್ ಮುಂದಿನ ಆರು ತಿಂಗಳಲ್ಲಿ 500 ಕ್ಕೂ ಅಧಿಕ ಐಟಿ ವೃತ್ತಿಪರ ಸಿಬ್ಬಂದಿಯನ್ನು ನೇಮಿಸಲು ಯೋಜನೆ ರೂಪಿಸಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

ಸೈಬರ್ ಭದ್ರತೆ, ತಾಂತ್ರಿಕ ಉತ್ಪನ್ನಗಳ ವ್ಯವಸ್ಥಾಪಕರು, DevOps, ಆಧುನಿಕ ವಾಸ್ತುಶಿಲ್ಪಿ, ಸಾಫ್ಟ್ ವೇರ್ ಇಂಜಿನಿಯರ್, ಸೇವಾ ನಿರ್ವಹಣೆ ಸೇರಿದಂತೆ ಹಲವು ಹುದ್ದೆಗಳಿಗೆ ಪರಿಣಿತರನ್ನು ನೇಮಿಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೆಪ್ಟೆಂಬರ್ ತಿಂಗಳಲ್ಲಿ ಎಮಿರೇಟ್ಸ್ ಗ್ರೂಪ್ 3000 ಕ್ಯಾಬಿನ್ ಸಿಬ್ಬಂದಿ ಮತ್ತು 500 ವಿಮಾನ ನಿಲ್ದಾಣ ಸೇವೆಗಳ ಉದ್ಯೋಗಿಗಳ ನೇಮಕಾತಿಯನ್ನು ಘೋಷಿಸಿತ್ತು.

- Advertisement -

ಅಕ್ಟೋಬರ್ ನಲ್ಲಿ ವಿಶ್ವಾದ್ಯಂತ ಕೋವಿಡ್ 19 ನಿಯಮಗಳನ್ನು ಸರಾಗಗೊಳಿಸುವ ಮತ್ತು ವ್ಯಾಕ್ಸಿನೇಷನ್ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಪ್ರತಿಕ್ರಿಯೆಯಾಗಿ ಮುಂದಿನ ಆರು ತಿಂಗಳಲ್ಲಿ 6000 ಕ್ಕೂ ಅಧಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಎಮಿರೇಟ್ಸ್ ಈ ಹಿಂದೆ ಘೋಷಿಸಿತ್ತು.

Join Whatsapp