Home ವಿದೇಶ ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ಇಲಾನ್ ಮಸ್ಕ್ ಸಂಪತ್ತು ಭಾರೀ ಹೆಚ್ಚಳ

ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ಇಲಾನ್ ಮಸ್ಕ್ ಸಂಪತ್ತು ಭಾರೀ ಹೆಚ್ಚಳ

ನವದೆಹಲಿ: ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಅಗುತ್ತಿದ್ದಂತೆಯೇ, ಅವರ ಪ್ರಬಲ ಬೆಂಬಲಿಗರಲ್ಲಿ ಒಬ್ಬರಾದ ವಿಶ್ವದ ನಂಬರ್ ಒನ್ ಉದ್ಯಮಿ ಇಲಾನ್ ಮಸ್ಕ್ ಅವರ ಸಂಪತ್ತಿನ ಮೌಲ್ಯ ಮತ್ತಷ್ಟು ಏರಿಕೆ ಆಗಿದೆ.


ಟೆಸ್ಲಾ, ಎಕ್ಸ್, ಸ್ಪೇಸ್ ಎಕ್ಸ್ ಇತ್ಯಾದಿ ಕಂಪನಿಗಳ ಒಡೆಯರಾದ ಇಲಾನ್ ಮಸ್ಕ್ ಅವರ ಒಟ್ಟಾರೆ ಆಸ್ತಿ ಮೌಲ್ಯ ಒಂದೇ ದಿನದಲ್ಲಿ ಶೇ. 7.73ರಷ್ಟು ಜಂಪ್ ಆಗಿದೆ.


ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿ ಪ್ರಕಾರ ಮಸ್ಕ್ ಅವರ ಆಸ್ತಿ ಮೌಲ್ಯ 285.2 ಬಿಲಿಯನ್ ಡಾಲರ್ ಇದೆ. ನಂಬರ್ ಒನ್ ಸ್ಥಾನವನ್ನು ಅವರು ಮತ್ತಷ್ಟು ಬದ್ರ ಮಾಡಿಕೊಂಡಿದ್ದಾರೆ.


ಕೆಲ ಕಾಲ ನಂಬರ್ ಒನ್ ಸ್ಥಾನಕ್ಕೆ ಏರಿದ್ದ ಅಮೇಜಾನ್ ಮುಖ್ಯಸ್ಥ ಜೆಫ್ ಬೇಜೋಸ್ ಅವರ ಆಸ್ತಿ ಮೌಲ್ಯ 223.5 ಬಿಲಿಯನ್ ಡಾಲರ್ ಇದ್ದು, ಫೋರ್ಬ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಒರೇಕಲ್ ಮುಖ್ಯಸ್ಥ ಲ್ಯಾರಿ ಎಲಿಸನ್ ಅವರ ಆಸ್ತಿಮೌಲ್ ಶೇ. 5.59ರಷ್ಟು ಹೆಚ್ಚಾಗಿದ್ದು ಅವರ ಆಸ್ತಿಮೌಲ್ಯ 220.8 ಬಿಲಿಯನ್ ಡಾಲರ್ ಇದೆ. ಜೆಫ್ ಬೇಜೋಸ್ ಸಂಪತ್ತಿಗೆ ಬಹಳ ಸಮೀಪದಲ್ಲಿ ಅವರದ್ದಿದೆ.
ಈ ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ 103 ಬಿಲಿಯನ್ ಡಾಲರ್ನೊಂದಿಗೆ 15ನೇ ಅತಿದೊಡ್ಡ ಶ್ರೀಮಂತ ಎನಿಸಿದ್ದಾರೆ. ಗೌತಮ್ ಅದಾನಿ 20ನೇ ಸ್ಥಾನದಲ್ಲಿದ್ದಾರೆ.


ಇಲಾನ್ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರು. ವರದಿಗಳ ಪ್ರಕಾರ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರಿದ ಬಳಿಕ ಅವರ ಟೀಮ್ ನಲ್ಲಿ ಮಸ್ಕ್ ಕೂಡ ಇರಲಿದ್ದಾರಂತೆ. ಹೀಗಾಗಿ, ಇಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಷೇರುಮೌಲ್ಯ ಮತ್ತಷ್ಟು ಏರತೊಡಗಿದೆ.

Join Whatsapp
Exit mobile version