Home ಗಲ್ಫ್ ಟ್ವಿಟರ್ ಖರೀದಿಗೆ ಎಲೋನ್ ಮಸ್ಕ್ 43 ಬಿಲಿಯನ್ ಡಾಲರ್ ಆಫರ್: ತಿರಸ್ಕರಿಸಿದ ಸೌದಿ ರಾಜಕುಮಾರ

ಟ್ವಿಟರ್ ಖರೀದಿಗೆ ಎಲೋನ್ ಮಸ್ಕ್ 43 ಬಿಲಿಯನ್ ಡಾಲರ್ ಆಫರ್: ತಿರಸ್ಕರಿಸಿದ ಸೌದಿ ರಾಜಕುಮಾರ

ರಿಯಾದ್: ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಅವರ ಟ್ವಿಟರ್ ಖರೀದಿಯ ಪ್ರಯತ್ನಕ್ಕೆ ಟೆಕ್ ಸಂಸ್ಥೆಯ ಪ್ರಮುಖ ಷೇರುದಾರ, ಸೌದಿ ರಾಜಕುಮಾರ ಕಡಿವಾಣ ಹಾಕಿದ್ದಾರೆ

ಸೌದಿ ರಾಜಕುಮಾರ ಅಲ್ವಾಲೀದ್ ಬಿನ್ ತಲಾಲ್ ಸೇರಿದಂತೆ ಕೆಲವು ಹೂಡಿಕೆದಾರರು ಟ್ವಿಟ್ಟರ್ ಅಧ್ಯಕ್ಷ ಬ್ರೆಟ್ ಟೇಲರ್ ಅವರಿಗೆ ಪತ್ರ ಬರೆದು ಎಲೋನ್ ಮಸ್ಕ್ ಆವರ 43 ಬಿಲಿಯನ್ ಡಾಲರ್ ಮೊತ್ತದ ಪ್ರಸ್ತಾಪದ ವಿರುದ್ಧ ಧ್ವನಿ ಎತ್ತಿದ್ದಾರೆ. ಎಲೋನ್ ಮಸ್ಕ್ (54.20 ಡಾಲರ್) ಪ್ರಸ್ತಾಪವು ಅದರ ಬೆಳವಣಿಗೆಯ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು @Twitter ಆಂತರಿಕ ಮೌಲ್ಯಕ್ಕೆ ಹತ್ತಿರವಾಗಿದೆ ಎಂದು ನಾನು ನಂಬುವುದಿಲ್ಲ” ಎಂದು ತಲಾಲ್ ಟ್ವೀಟ್ ಮಾಡಿದ್ದಾರೆ.

ಮಸ್ಕ್ ತಮ್ಮ ಮೌಲ್ಯಮಾಪನದಲ್ಲಿ, ಟ್ವಿಟರ್ ನ ಪ್ರತಿ ಷೇರಿಗೆ 54.20 ಡಾಲರ್ ನೀಡುವುದಾಗಿ ಹೇಳಿದ್ದರು. “ಟ್ವಿಟರ್  ನ ಅತಿದೊಡ್ಡ ಮತ್ತು ದೀರ್ಘಕಾಲೀನ ಷೇರುದಾರರಲ್ಲಿ ಒಬ್ಬರಾಗಿರುವ ನಾನು ಈ ಪ್ರಸ್ತಾಪವನ್ನು ತಿರಸ್ಕರಿಸುತ್ತೇವೆ” ಎಂದು ತಲಾಲ್ ಟ್ವೀಟ್ ಮಾಡಿದ್ದಾರೆ.

ಎಲೋನ್ ಮಸ್ಕ್ ಶೇ.9ರಷ್ಟು ಪಾಲು ಹೊಂದಿದ್ದು ಇದೀಗ ಟ್ವಿಟರಿನ ಪೂರ್ಣ ಪ್ರಮಾಣದ ಶೇರು ಪಡೆಯುವ ಶತ ಪ್ರಯತ್ನದಲ್ಲಿದ್ದಾರೆ.

Join Whatsapp
Exit mobile version