ಹಿಂಸೆಗೆ ಪ್ರಚೋದಿಸುವ ಟ್ವೀಟ್:  ಕಾನ್ಯೆ ವೆಸ್ಟ್ ರ ಟ್ವೀಟರ್ ಖಾತೆ ಅಮಾನತುಗೊಳಿಸಿದ  ಎಲಾನ್ ಮಸ್ಕ್

Prasthutha|

ವಾಷಿಂಗ್ಟನ್: ಹಿಂಸೆಗೆ ಪ್ರಚೋದನೆ ನೀಡುವ ಟ್ವೀಟ್ ಮಾಡಿದ್ದ ಆರೋಪದಡಿ ಅಮೆರಿಕದ ರ್ಯಾಮಪರ್ ಕಾನ್ಯೆ ವೆಸ್ಟ್ ಅವರ ಟ್ವೀಟರ್ ಖಾತೆಯನ್ನು ಮತ್ತೆ ಅಮಾನತುಗೊಳಿಸಲಾಗಿದೆ.

- Advertisement -

ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ನ ನಿಯಮ ಉಲ್ಲಂಘನೆಯಿಂದ ಅಮಾನತುಗೊಂಡಿದ್ದ ಖಾತೆಯನ್ನು ಎರಡು ತಿಂಗಳ ನಂತರ ಮರುಸ್ಥಾಪಿಸಲಾಗಿತ್ತು. ಇದೀಗ ಮತ್ತೆ ನಿಮಯ ಉಲ್ಲಂಘನೆ ಸಂಬಂಧ ರ್ಯಾಿಪರ್ ಕಾನ್ಯೆ ವೆಸ್ಟ್ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು  ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಹೇಳಿದ್ದಾರೆ.

ಹೈಪ್ರೊಫೈಲ್ ಟ್ವಿಟ್ಟರ್ ಬಳಕೆದಾರರಾದ ಕಾನ್ಯೆ ವೆಸ್ಟ್ ಅವರು ಸಂದರ್ಶನವೊಂದರಲ್ಲಿ ಅಡಾಲ್ಫ್ ಹಿಟ್ಲರ್ ಮತ್ತು ನಾಜಿಗಳನ್ನು ಹೊಗಳಿದ್ದರು. ಜುದಾಯಿಸಂನ ಸಂಕೇತವಾದ ಸ್ಟಾರ್ ಆಫ್ ಡೇವಿಡ್ ಮತ್ತು ಹಿಟ್ಲರ್ ನಾಜಿ ಪಕ್ಷದ ಚಿಹ್ನೆ ಸ್ವಸ್ತಿಕಾವನ್ನು ಸಂಯೋಜಿಸುವ ವಿನ್ಯಾಸವನ್ನು ತಮ್ಮ ಪ್ರಚಾರದ ಲೋಗೊ ಆಗಿ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -

ಗುರುವಾರ ಕ್ಯಾನೆ ವೆಸ್ಟ್ ಅವರ ಟ್ವೀಟ್ ಗಳನ್ನು ನಿರ್ಬಂಧಿಸಲಾಗಿದ್ದು, ಖಾತೆಯನ್ನು ಅಮಾನತು ಮಾಡಲಾಗಿದೆ. ಎಲಾನ್ ದಯವಿಟ್ಟು ಕ್ಯಾನೆ ಅವರ ತಪ್ಪನ್ನು ಸರಿಪಡಿಸಿ ಎಂದು ಟ್ವಿಟರ್ ಬಳಕೆದಾರರೊಬ್ಬರು ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸಿದ ಒಂದೇ ಗಂಟೆಯಲ್ಲಿ ಮಸ್ಕ್ ಕ್ರಮ ಕೈಗೊಂಡಿದ್ದಾರೆ.



Join Whatsapp