ವಾಷಿಂಗ್ಟನ್: ಎಲಾನ್ ಮಸ್ಕ್ ಅವರು ಟ್ವಿಟರ್ ಲೋಗೋವನ್ನು ಬದಲಿಸಿ ನೀಲಿ ಹಕ್ಕಿಯ ಬದಲಾಗಿ “ಡಾಗಿ” (ನಾಯಿಯ ಮುಖ) ಚಿತ್ರವನ್ನು ಹಾಕಿದ್ದು ಕುತೂಹಲ ಮೂಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಲಾನ್ ಮಸ್ಕ್, “ಭರವಸೆ ನೀಡಿದಂತೆ ಮಾಡಿದ್ದೇನೆ” ಎಂದು ಸಾಮಾಜಿಕ ಜಾಲತಾಣದ ಲೋಗೋ ಬದಲಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.
ಟ್ವಿಟರ್ ಖರೀದಿಗೂ ಮುನ್ನ ಬಳಕೆದಾರರ ಜೊತೆ ನಡೆಸಿದ ಸಂಭಾಷಣೆಯ ವೇಳೆ ಮೈಕ್ರೋಬ್ಲಾಗರ್ ಅನ್ನು ಖರೀದಿ ಮಾಡಲು ಬಳಕೆದಾರ ಮಸ್ಕ್ ಗೆ ತಿಳಿಸಿದ್ದ. ಬಳಿಕ ಅದರ ಲೋಗೋವನ್ನೂ ಬದಲಿಸಲು ಸಾಧ್ಯವೇ ಎಂದು ಸವಾಲು ಹಾಕಿದ್ದ. ಅದರಂತೆ ಮಸ್ಕ್ ಟ್ವಿಟರ್ ಅನ್ನು ಖರೀದಿ ಮಾಡಿದ್ದು, ಇದೀಗ ಅದರ ಬ್ರ್ಯಾಂಡ್ ಲೋಗೋವನ್ನೂ ಬದಲಿಸಿದ್ದಾರೆ.