ನೀರಿನ ಅಭಾವದ ವಿರುದ್ಧ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಜಲಫಿರಂಗಿ ಪ್ರಯೋಗಿಸಿದ ಪೊಲೀಸರು

Prasthutha|

ದೆಹಲಿ: ತೀವ್ರ ರೀತಿಯ ಕುಡಿಯುವ ನೀರಿನ ಅಭಾವವನ್ನು ಬಗೆಹರಿಸುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟನೆಗಿಳಿದ ಬಿಜೆಪಿ ಕಾರ್ಯಕರ್ತರ ಮೇಲೆ ದೆಹಲಿ ಪೊಲೀಸರು, ಲಾಠಿ ಜಾರ್ಜ್, ಜಲಫಿರಂಗಿ ಪ್ರಯೋಗಿಸಿದ ಘಟನೆ ರಾಜಧಾನಿ ದೆಹಲಿಯಲ್ಲಿ ಸೋಮವಾರ ನಡೆದಿದೆ.

- Advertisement -

ದೆಹಲಿ ಬಿಜೆಪಿ ಮುಖ್ಯಸ್ಥರಾದ ಆದೇಶ ಗುಫ್ತಾ ರಾಜ್ಯದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ರವರ ನಿವಾಸದ ಮುಂಭಾಗದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ದೆಹಲಿ ಪೋಲಿಸರು ನಮ್ಮ ಕಾರ್ಯಕರ್ತರ ಮೇಲೆ ಜಲಫಿರಂಗಿ ಪ್ರಯೋಗಿಸಿದ್ದಾರೆಂದು ಆರೋಪಿಸಿದ್ದಾರೆ.


ದೆಹಲಿಯೆಲ್ಲೆಡೆ ನಳ್ಳಿಯ ನೀರು ಮನೆ ಮನೆಗೆ ಸರಬರಾಜು ಆಗುತ್ತಿದ್ದು, ಈ ನೀರು ಕಲುಷಿತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ನಮ್ಮ ಕಾರ್ಯಕರ್ತರ ಮೇಲೆ ಏಕಾಏಕಿ ಜಲಫಿರಂಗಿ ಮತ್ತು ಲಾಠಿಚಾರ್ಜ್ ಮಾಡಿರುವುದರಿಂದ ಹಲವು ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದರು.

- Advertisement -


ಮಾತ್ರವಲ್ಲದೆ ಈ ಕುರಿತು ಬಿಜೆಪಿ ದೆಹಲಿ ಮಾಧ್ಯಮ ವಕ್ತಾರ ನವೀನ್ ಕುಮಾರ್ “ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಟ್ಯಾಂಕರ್ ಮಾಫಿಯಾವನ್ನು ಬೆಂಬಲಿಸುತ್ತಿದೆಯೆಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಮಧ್ಯೆ ಹರ್ಯಾಣ ಸರ್ಕಾರದ ದ್ವಿಮುಖ ನೀತಿಯಿಂದಾಗಿ ದೆಹಲಿಯಾದ್ಯಂತ ನೀರಿನ ಸಮಸ್ಯೆ ತಲೆದೋರಿದೆಯೆಂದು ದೆಹಲಿ ಸರ್ಕಾರವು ಅಧಿಕೃತವಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Join Whatsapp