ಗುವಾಹಟಿ: ಅಸ್ಸೋಂನ ತೇಜ್ಪುರದಲ್ಲಿ ಆನೆಯೊಂದು ರಸ್ತೆ ಬದಿಯ ಸ್ಟಾಲ್ ನಲ್ಲಿ ಪಾನಿಪುರಿ ತಿನ್ನುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಪಾನಿಪುರಿ ಮಾರಾಟಗಾರ ಪಕ್ಕದಲ್ಲಿ ನಿಂತ ಆನೆಗೆ ಒಂದರ ಹಿಂದೆ ಒಂದರಂತೆ ಪಾನಿಪುರಿ ನೀಡುತ್ತಿದ್ದು, ಆನೆ ತನ್ನ ಸೊಂಡಲಿನಿಂದ ಬಾಯಿಯೊಳಗೆ ಹಾಕಿಕೊಳ್ಳುತ್ತಿದೆ. ಆನೆಯ ಪಕ್ಕದಲ್ಲಿ ಕಾವಲುಗಾರ ನಿಂತಿರುವುದನ್ನು ನಾವು ನೋಡಬಹುದಾಗಿದೆ.
Looking cute 🥰 #elephant #panipuri pic.twitter.com/ChMOzTqixs
— Yodha (@kksomasekhar) October 11, 2022
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಖುಷಿಪಟ್ಟಿದ್ದಾರೆ.