Home ಟಾಪ್ ಸುದ್ದಿಗಳು ಸಕಲೇಶಪುರದಲ್ಲಿ ನಿಲ್ಲದ ಕಾಡಾನೆಗಳ ಉಪಟಳ

ಸಕಲೇಶಪುರದಲ್ಲಿ ನಿಲ್ಲದ ಕಾಡಾನೆಗಳ ಉಪಟಳ

ಸಕಲೇಶಪುರ: ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಬೆಳ್ಳಂಬೆಳಗ್ಗೆ ಕಾಡಾನೆಗಳು ಗ್ರಾಮದೊಳಕ್ಕೆ ಎಂಟ್ರಿಕೊಟ್ಟು ಅತಂಕಕ್ಕೀಡು ಮಾಡಿವೆ.

ಸಕಲೇಶಪುರ ತಾಲೂಕಿನ ಈಚಲವಳ್ಳಿ ಹಾಗೂ ಹಲಸುಲಿಗೆ ಗ್ರಾಮದೊಳಕ್ಕೆ ಕಾಡಾನೆಗಳು ಬಂದಿದ್ದು, ಕಾಡಾನೆಗಳನ್ನು ಕಂಡ ಜನರು ಮನೆಯೊಳಕ್ಕೆ ಓಡಿ ಹೋಗಿದ್ದಾರೆ. ಈಚಲವಳ್ಳಿ ಗ್ರಾಮದ ಕಿರಣ್ ಕುಶಾಲಪ್ಪ ಅವರ ಮನೆಯ ಬಳಿಗೆ ವಾರದಲ್ಲಿ ಎರಡನೇ ಬಾರಿಗೆ ಗಜಪಡೆ ಎಂಟ್ರಿಕೊಟ್ಟಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಾನೆಗಳು ಗ್ರಾಮದೊಳಕ್ಕೆ ಬಂದಿರುವ ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೇರೆಡೆಗೆ ಕಳಿಸುವ ಪ್ರಯತ್ನ ಮಾಡ್ತಿದ್ದಾರೆ. ಇತ್ತ ಗ್ರಾಮಸ್ಥರು ಸರ್ಕಾರ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

Join Whatsapp
Exit mobile version