ಕೊರೋನಾ ಸಂಕಷ್ಟದ ನಡುವೆ ಜನತೆಗೆ ಮತ್ತೊಂದು ಶಾಕ್ | ವಿದ್ಯುತ್ ದರ ಏರಿಕೆ!

Prasthutha|

ಬೆಂಗಳೂರು : ಕೋವಿಡ್ ಸಂಕಷ್ಟದಿಂದ ತತ್ತರಿಸಿರುವ ಜನತೆಗೆ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆಯ ಶಾಕ್ ನೀಡಿದೆ. 2021-22ನೇ ಆರ್ಥಿಕ ವರ್ಷದಲ್ಲಿ ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆಯಷ್ಟು ದರ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದು, ಇದರ ಪರಿಣಾಮ ಚಿಲ್ಲರೆ ವಿದ್ಯುಚ್ಛಕ್ತಿ ಸರಬರಾಜು ದರದಲ್ಲಿ ಸರಾಸರಿ 3.84ರಷ್ಟು ಹೆಚ್ಚಳವಾಗಿದೆ.

- Advertisement -

ಪರಿಷ್ಕೃತ ದರ ಎಪ್ರಿಲ್ 1ರಿಂದ ಅನ್ವಯವಾಗಲಿದೆ. ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತಿ ಯೂನಿಟ್ ಗೆ 83ಪೈಸೆಗಳಿಂದ 168 ಪೈಸೆಗಳವರೆಗೆ ದರ ಹೆಚ್ಚಳಕ್ಕೆ ಮನವಿ ಮಾಡಿದ್ದವು. ಬೆಂಗಳೂರು ಮೆಟ್ರೋ ಮತ್ತು ವಿದ್ಯುತ್ ವಾಹನಗಳ ಚಾರ್ಜಿಂಗ್ ಸ್ಟೇಶನ್ ಗಳನ್ನು ಹೊರತುಪಡಿಸಿ ಎಲ್ಲಾ ಪ್ರವರ್ಗಗಳ ವಿವಿಧ ಹಂತಗಳಲ್ಲಿನ ವಿದ್ಯುತ್ ದರ ಪ್ರತಿ ಯೂನಿಟ್ ಗೆ 10 ಪೈಸೆ ಹೆಚ್ಚಳವಾಗಿದ್ದು, ನಿಗದಿತ ಶುಲ್ಕದಲ್ಲಿ 10 ರೂ.ರಿಂದ 20 ರೂ.ವರೆಗೆ ಹೆಚ್ಚಳವಾಗಿದೆ. ಒಟ್ಟಾರೆ ಶೇಕಡಾ 3.84ರ ದರ ಹೆಚ್ಚಳದೊಂದಿಗೆ ವಿದ್ಯುಚ್ಛಕ್ತಿ ದರ ಹೆಚ್ಚಳವು ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆ ಆಗಿದೆ.

Join Whatsapp