ಮತದಾರರ ಪಟ್ಟಿ; ಚುನಾವಣಾ ಆಯೋಗದ ನಿರ್ದೇಶನ ಪಾಲಿಸಲು ಅನ್ಬುಕುಮಾರ್ ಸೂಚನೆ

Prasthutha|

ಮಡಿಕೇರಿ: ಜನವರಿ 1, 2022 ಅರ್ಹತಾ ದಿನಾಂಕದಂತೆ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೈಗೊಳ್ಳುವಂತೆ ಮತದಾರರ ಪಟ್ಟಿ ವೀಕ್ಷಕರಾದ ವಿ.ಅನ್ಬು ಕುಮಾರ್ ಸೂಚಿಸಿದ್ದಾರೆ.

- Advertisement -

 ಕೊಡಗು ಜಿಲ್ಲೆಗೆ ಮತದಾರರ ಪಟ್ಟಿ ಸಂಬಂಧಿಸಿದಂತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಹಶೀಲ್ದಾರರು ನಮೂನೆ-6,7,8 ಮತ್ತು 8 ಎ ಗಳನ್ನು ನಿಯಮಾನುಸಾರ ಇತ್ಯರ್ಥಗೊಳಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಮತದಾನದ ಹಕ್ಕು ಸಾಂವಿಧಾನಿಕ ಹಕ್ಕು ಆಗಿದ್ದು, 18 ವರ್ಷ ಮೀರಿದ ಭಾರತೀಯ ಪ್ರಜೆಗೆ ಈ ಮತದಾನ ಹಕ್ಕನ್ನು ಒಗದಿಸುವುದು ಮತದಾರರ ನೋಂದಣಾಧಿಕಾರಿಗಳ ಕರ್ತವ್ಯವಾಗಿದೆ ಎಂದು ಮತದಾರರ ಪಟ್ಟಿ ವೀಕ್ಷಕರು ತಿಳಿಸಿದರು.

- Advertisement -

 ಕ್ಲೇಮು ಮತ್ತು ಆಕ್ಷೇಪಣೆ ಸ್ವೀಕರಿಸುವ ಅವಧಿಯಲ್ಲಿ ಮತಗಟ್ಟೆವಾರು ಸ್ವೀಕೃತವಾಗಿರುವ ಒಟ್ಟು ನಮೂನೆ, ಅಂಗೀಕಾರ ಮತ್ತು ತಿರಸ್ಕೃತ ಅಂಕಿ ಅಂಶಗಳ ವಿವರವನ್ನು ನೀಡುವುದು. ಬೂತ್ ಮಟ್ಟದ ಅಧಿಕಾರಿಗಳು ನಮೂನೆಗಳನ್ನು ತಾಲ್ಲೂಕು ಕಚೇರಿಗೆ ನೀಡಿದ್ದು, ತಾಲ್ಲೂಕು ಕಚೇರಿಯಲ್ಲಿ ಡಾಟಾ ಎಂಟ್ರಿ ಮಾಡದೇ ಬಾಕಿ ಇರುವ ಅರ್ಜಿಗಳ ಮತಗಟ್ಟೆವಾರು ವಿವರ ನೀಡುವುದು. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹೆಸರು ಸೇರ್ಪಡೆಗೆ ಸಲ್ಲಿಸಲಾದ ನಮೂನೆ-6ನ್ನು ತಿರಸ್ಕರಿಸಿದ್ದಲ್ಲಿ, ಮತದಾರರ ನೋಂದಣಾಧಿಕಾರಿ ಅವರ ಆದೇಶದ ವಿರುದ್ಧ ಮತದಾರರು ಮೇಲ್ಮನವಿ ಸಲ್ಲಿಸಲು ನಿಯಮಗಳಲ್ಲಿ ಅವಕಾಶ ಇರುವುದರಿಂದ ತಿರಸ್ಕರಿಸಿದ ಎಲ್ಲಾ ನಮೂನೆಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ರಿಜಿಸ್ಟರ್ ಪೋಸ್ಟ್ (ಆರ್ಪಿಎಡಿ) ಮೂಲಕ ಮಾಹಿತಿ ನೀಡುವಂತೆ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.

Join Whatsapp