ಹೈದರಾಬಾದ್: ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಭಾರತ್ ರಾಷ್ಟ್ರ ಸಮಿತಿ(ಬಿಆರ್ ಎಸ್) ಮುಖ್ಯಸ್ಥ ಮತ್ತು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಕೇಂದ್ರ ಚುನಾವಣಾ ಆಯೋಗ(ಇಸಿಐ) ನೋಟಿಸ್ ಜಾರಿ ಮಾಡಿದೆ.
ಮಂಗಳವಾರ ರಾತ್ರಿ ನೀಡಲಾದ ನೋಟಿಸ್ ನ ಪ್ರಕಾರ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ”ಲಟ್ಖೋರ್” ಮತ್ತು ”ಚವಾಟಾ ದಡ್ಡಮಾಸ್” ಮತ್ತು ನಿಷ್ಪ್ರಯೋಜಕ ಫೆಲೋಗಳು ಎಂದು ಕರೆದ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗ ಚಂದ್ರಶೇಖರ್ ರಾವ್ ಅವರಿಗೆ ಸೂಚಿಸಿದೆ.
ಏಪ್ರಿಲ್ 18, 2024 ರಂದು ಬೆಳಗ್ಗೆ 11 ಗಂಟೆಯೊಳಗೆ ಕಾಂಗ್ರೆಸ್ ವಿರುದ್ಧ “ಅಶ್ಲೀಲ”, “ಅವಹೇಳನಕಾರಿ” ಮತ್ತು “ಆಕ್ಷೇಪಾರ್ಹ” ಹೇಳಿಕೆಯ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗ, ತೆಲಂಗಾಣ ಮಾಜಿ ಸಿಎಂಗೆ ಸೂಚಿಸಿದೆ.