ಸತ್ತ ಮೇಲೆ ಗೆದ್ದ ಚುನಾವಣಾ ಅಭ್ಯರ್ಥಿ: ಗೆಲ್ಲಿಸಿದ ಗ್ರಾಮಸ್ಥರು

Prasthutha|

ಹರಿಯಾಣ: ಮೃತ ಅಭ್ಯರ್ಥಿಯನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಗೆಲ್ಲಿಸಿದ ವಿಶಿಷ್ಟ ಪ್ರಕರಣ ಒಂದು ಶಹಬಾದ್ ನ ಜಾಂದೇಡಿ ಗ್ರಾಮದಲ್ಲಿ ವರದಿಯಾಗಿದೆ.

- Advertisement -


ಫಲಿತಾಂಶ ಬಂದಾಗ ಇಲ್ಲಿನ ಜನರು ಮೃತ ಅಭ್ಯರ್ಥಿ ಪರ ಮತ ಚಲಾಯಿಸಿದ್ದರಿಂದ ಚುನಾವಣಾಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ಇಲ್ಲಿನ ಸರಪಂಚ್ ಹುದ್ದೆಗೆ ಅಭ್ಯರ್ಥಿಯಾಗಿದ್ದ ರಾಜಬೀರ್ ಸಿಂಗ್ ಅವರು ಮತದಾನಕ್ಕೆ ಒಂದು ವಾರ ಮೊದಲು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದರು. ಇದಕ್ಕೂ ಮುನ್ನ ರಾಜ್ಬೀರ್ ಸರಪಂಚ್ ಹುದ್ದೆಗೆ ನಾಮನಿರ್ದೇಶನ ಮಾಡಿದ್ದು, ಪ್ರಚಾರವನ್ನೂ ಆರಂಭಿಸಿದ್ದರು. ನವೆಂಬರ್ 12 ರಂದು ಗ್ರಾಮಸ್ಥರು ರಾಜ್ಬೀರ್ ಪರವಾಗಿ ಮತ ಚಲಾಯಿಸಿದ್ದಾರೆ. ಆದರೆ ಮೃತ ಅಭ್ಯರ್ಥಿ ರಾಜಬೀರ್ ಸಿಂಗ್ ಗೆದ್ದಿದ್ದಾರೆ.


ಇನ್ನು 6 ತಿಂಗಳಲ್ಲಿ ಮತ್ತೆ ಇಲ್ಲಿ ಚುನಾವಣೆ ನಡೆಯಲಿದೆ ಎಂದು ಡಿಡಿಪಿಒ ಪ್ರತಾಪ್ ಸಿಂಹ ತಿಳಿಸಿದ್ದಾರೆ.

Join Whatsapp
Exit mobile version