Home ಟಾಪ್ ಸುದ್ದಿಗಳು ಚುನಾವಣಾ ಬಾಂಡ್‌ ಸ್ವತಂತ್ರ ಭಾರತದಲ್ಲಿ ನಡೆದಿರುವ ಮೆಗಾ ಹಗರಣ: ಸೀತಾರಾಂ ಯೆಚೂರಿ

ಚುನಾವಣಾ ಬಾಂಡ್‌ ಸ್ವತಂತ್ರ ಭಾರತದಲ್ಲಿ ನಡೆದಿರುವ ಮೆಗಾ ಹಗರಣ: ಸೀತಾರಾಂ ಯೆಚೂರಿ

ನವದೆಹಲಿ: ಚುನಾವಣಾ ಬಾಂಡ್‌ ಯೋಜನೆಯು ಸ್ವತಂತ್ರ ಭಾರತದಲ್ಲಿ ನಡೆದಿರುವ ಅತ್ಯಂತ ಕೆಟ್ಟ, ಮೆಗಾ ಭ್ರಷ್ಟಾಚಾರ ಹಗರಣವಾಗಿದ್ದು, ಇದರಲ್ಲಿ ಮಾಫಿಯಾ ಮಾದರಿಯ ಸುಲಿಗೆ ನಡೆದಿದೆ ಎಂದು ಸಿಪಿಐ ನಾಯಕ ಸೀತಾರಾಂ ಯೆಚೂರಿ ಹೇಳಿದ್ದಾರೆ.

ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಲು ಮತ್ತು ಆ ಮೂಲಕ ನ್ಯಾಯಸಮ್ಮತವಾಗಿ ದಾನ ಮಾಡಲು ಅನುಕೂಲ ಕಲ್ಪಿಸಿತ್ತು. ಕೆಲ ಕಂಪನಿಗಳು ತಮ್ಮ ವಾರ್ಷಿಕ ಲಾಭಕ್ಕಿಂತಲೂ ಹೆಚ್ಚು ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಇದು ಈ ಹಗರಣದ ವ್ಯಾಪ್ತಿಯನ್ನು ತಿಳಿಸುತ್ತದೆ ಎಂದು ಅವರು ದೂರಿದ್ದಾರೆ.

ಹಣ ವರ್ಗಾವಣೆಗೆ ನಕಲಿ ಕಂಪನಿಗಳನ್ನು ಬಳಸಲಾಗಿದೆ ಎಂದೂ ತಿಳಿಸಿರುವ ಸಿಪಿಐಎಂ ನಾಯಕ,, ವಿವಿಧ ತನಿಖಾ ಏಜೆನ್ಸಿಗಳ ಅಡಿಯಲ್ಲಿ ತನಿಖೆ ಎದುರಿಸುತ್ತಿರುವ ಕಂಪನಿಗಳು ದೇಣಿಗೆ ನೀಡಿವೆ ಎಂದು ಹೇಳಿದ್ದಾರೆ.

Join Whatsapp
Exit mobile version