Home ಟಾಪ್ ಸುದ್ದಿಗಳು ಎಲ್ಲಾ ಏರ್ಲೈನ್ಸ್ ಗಳಲ್ಲಿ ತಿಂಡಿ, ಊಟ ವಿತರಣೆ ಪುನರಾರಂಭಿಸಿದ “ವಿಸ್ತಾರ ಸಂಸ್ಥೆ”

ಎಲ್ಲಾ ಏರ್ಲೈನ್ಸ್ ಗಳಲ್ಲಿ ತಿಂಡಿ, ಊಟ ವಿತರಣೆ ಪುನರಾರಂಭಿಸಿದ “ವಿಸ್ತಾರ ಸಂಸ್ಥೆ”

ಬೆಂಗಳೂರು: ಟಾಟಾ ಗ್ರೂಪ್ ಹಾಗೂ ಸಿಂಗಾಪುರ ಏರ್‌ಲೈನ್ಸ್ ಸಹಭಾಗಿತ್ವದ “ವಿಸ್ತಾರ” ಸಂಸ್ಥೆಯು ಏರ್‌ಲೈನ್ಸ್ ಗಳಲ್ಲಿ ಸ್ಥಗಿತಗೊಳಿಸಿದ್ದ ಸೇವೆಯನ್ನು ಪುನರಾರಂಭಿಸುತ್ತಿದೆ. ಹೌದು, ಕೋವಿಡ್ ಕಾರಣದಿಂದಾಗಿ ವಿಸ್ತಾರ ಸಂಸ್ಥೆಯು ಏರ್‌ಲೈನ್ಸ್ ಗಳಲ್ಲಿ ಆಹಾರ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅದರಲ್ಲೂ ಎಕನಾಮಿಕ್ ಕ್ಲಾಸ್ ಗಳಲ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. 90 ನಿಮಿಷ ಕ್ಕೂ ಹೆಚ್ಚು ಸಮಯ ಸಂಚಾರ ನಡೆಸುವ ವಿಮಾನಗಳಲ್ಲಿ ಮೊದಲಿನಂತೆಯೇ ಸ್ಟಾರ್‌ಬಕ್ಸ್, ಕಾಫಿ, ಚಹಾ, ಮಾಂಸದಾಹಾರ, ಇತರೆ ಆಹಾರಗಳಿಗೆ ಅವಕಾಶ ನೀಡಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಏರ್‌ಲೈನ್ಸ್ಗಳಲ್ಲಿ ಆಹಾರ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ಮಾತನಾಡಿದ ವಿಸ್ತಾರ ಏರ್‌ಲೈನ್ಸ್ನ ಮುಖ್ಯ ವಾಣಿಜ್ಯಾಧಿಕಾರಿ ದೀಪಕ್ ರಜಾವತ್, ಕೋವಿಡ್‌ನಿಂದ ಜಗತ್ತು ಸಹಜ ಸ್ಥಿತಿಗೆ ಮರಳುತ್ತಿದ್ದು ನಮ್ಮ ಸಂಸ್ಥೆಯು ಸಹ ಎಲ್ಲಾ ಏರ್‌ಲೈನ್ಸ್ ಗಳಲ್ಲಿ ಆಹಾರ ವಿತರಣೆಯನ್ನು ಪ್ರಾರಂಭಿಸಲು ಮುಂದಾಗಿದೆ. ಬಿಸಿನೆಸ್ ಕ್ಲಾಸ್‌ಗಳಲ್ಲಿ ಮೆನು ಕಾರ್ಡ್ ಗಳನ್ನು ಹೊಸದಾಗಿ ಪರಿಚಯಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಬಾರ್ ವ್ಯವಸ್ಥೆಯನ್ನು ಸುಧಾರಿಸಿದೆ ಎಂದರು. ನಮ್ಮೆಲ್ಲಾ ಸಿಬ್ಬಂದಿಯು ಲಸಿಕೆ ಹಾಕಿಸಿಕೊಂಡಿದ್ದು, ಎಲ್ಲಾ ರೀತಿಯ ಸಿದ್ಧತೆ ಮೇರೆಗೆ ಸೇವೆ ಪುನರಾರಂಭಿಸಲಾಗುತ್ತಿದೆ ಎಂದು ಹೇಳಿದರು.

Join Whatsapp
Exit mobile version