Home ಟಾಪ್ ಸುದ್ದಿಗಳು ಬಸ್–ಕ್ರೂಸರ್’ಗೆ ಡಿಕ್ಕಿ: 8 ಮಂದಿ ಮೃತ್ಯು

ಬಸ್–ಕ್ರೂಸರ್’ಗೆ ಡಿಕ್ಕಿ: 8 ಮಂದಿ ಮೃತ್ಯು

ಚಂಡೀಗಢ: ಬಸ್‌–ಕ್ರೂಸರ್‌ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 8 ಮಂದಿ ಮೃತಪಟ್ಟು, 12 ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಜಿಂದ್‌ನ ಭಿವಾನಿ ರಸ್ತೆಯಲ್ಲಿರುವ ಬಿಬಿಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.


ಇಂದು ಬೆಳಿಗ್ಗೆ ಜಿಂದ್ ಬಸ್ ನಿಲ್ದಾಣದಿಂದ 9:30ರ ಸುಮಾರಿಗೆ ಹೊರಟ ಬಸ್ ಬೀಬಿಪುರ ಗ್ರಾಮದ ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ಬರುತ್ತಿದ್ದ ಕ್ರೂಸರ್ ಬಸ್’ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.


ಡಿಕ್ಕಿಯ ರಭಸಕ್ಕೆ ಕ್ರೂಸರ್ ನಜ್ಜುಗುಜ್ಜಾಗಿದದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯನಡೆಸಿ ಗಾಯಾಳುಗಳನ್ನು ತಕ್ಷಣ ಜಿಂದ್ ಜನರಲ್ ಆಸ್ಪತ್ರೆಗೆ ವೈದ್ಯಕೀಯ ಚಿಕಿತ್ಸೆಗಾಗಿ ರವಾನಿಸಿದ್ದಾರೆ.

Join Whatsapp
Exit mobile version