Home ಗಲ್ಫ್ ಸೌದಿ ಅರೇಬಿಯಾ ತಲುಪಿದ ಭಾರತೀಯ ವಾಯುಪಡೆಯ ಎಂಟು ವಿಮಾನಗಳು

ಸೌದಿ ಅರೇಬಿಯಾ ತಲುಪಿದ ಭಾರತೀಯ ವಾಯುಪಡೆಯ ಎಂಟು ವಿಮಾನಗಳು

ರಿಯಾದ್: ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ರಕ್ಷಣಾ ಒಪ್ಪಂದವನ್ನು ಬಲಪಡಿಸುವ ಭಾಗವಾಗಿ,145 ಸಿಬ್ಬಂದಿಯನ್ನೊಳಗೊಂಡ ಭಾರತೀಯ ವಾಯುಪಡೆಯ ಎಂಟು ವಿಮಾನಗಳು ಇತಿಹಾಸದಲ್ಲೇ ಮೊದಲ ಬಾರಿ ಸೌದಿ ಅರೇಬಿಯಾಕ್ಕೆ ತಲುಪಿದೆ.
ವಾಯುಪಡೆಯ 05 ಮಿರಾಜ್, 02 C17 ಮತ್ತು 01 IL78 ಟ್ಯಾಂಕರ್‌ಗಳೊಂದಿಗೆ 145 ಏರ್ ವಾರಿಯರ್‌ಗಳ ಭಾರತೀಯ ತುಕಡಿಯು ರಾಯಲ್ ಸೌದಿ ಏರ್ ಫೋರ್ಸ್ ಬೇಸ್‌ಗೆ ತಲುಪಿದೆ.

ವಾಯುಪಡೆ ಸಿಬ್ಬಂದಿಯನ್ನು ಸೌದಿಯಲ್ಲಿರುವ ಭಾರತೀಯ ರಾಯಭಾರಿ ಡಾ. ಸುಹೇಲ್ ಅಜಾಜ್ ಖಾನ್, ಡಿಫೆನ್ಸ್ ಅಟ್ಯಾಚ್ ಕರ್ನಲ್ ಜಿಎಸ್ ಗ್ರೆವಾಲ್ ಮತ್ತು ರಾಯಭಾರಿ ಅಧಿಕಾರಿಗಳು ಬರಮಾಡಿಕೊಂಡರು. ನಂತರ ತಂಡವು ಸೌದಿ ವಾಯುಪಡೆಯ ಬೇಸ್ ಕಮಾಂಡರ್ ಅವರನ್ನು ಭೇಟಿ ಮಾಡಿತು.

ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಶೋನಲ್ಲಿ ಸೌದಿ ಅರೇಬಿಯಾ ಕೂಡ ಭಾಗವಹಿಸಿತ್ತು. ಸೌದಿ ಅರೇಬಿಯಾ ಭೇಟಿಯ ನಂತರ ಭಾರತೀಯ ತಂಡವು ಕೋಬ್ರಾ ವಾರಿಯರ್ 23 ತಾಲೀಮ್ ನಲ್ಲಿ ಭಾಗವಹಿಸಲು ಬ್ರಿಟನ್ ಗೆ ಹೊರಟಿದೆ.

Join Whatsapp
Exit mobile version