Home ಕರಾವಳಿ ಜುಲೈ 10ಕ್ಕೆ ಈದುಲ್ ಅಝ್ಹಾ: ಸಲಫಿ ಹಿಲಾಲ್ ಕಮಿಟಿ ಘೋಷಣೆ

ಜುಲೈ 10ಕ್ಕೆ ಈದುಲ್ ಅಝ್ಹಾ: ಸಲಫಿ ಹಿಲಾಲ್ ಕಮಿಟಿ ಘೋಷಣೆ

ಮಂಗಳೂರು: ಕರ್ನಾಟಕದ ಕರಾವಳಿ ತೀರದಲ್ಲಿ ಧಾರಾಕಾರ ಮಳೆ ಮತ್ತು ಆಕಾಶದಲ್ಲಿ ಮೋಡ ಕವಿದಿರುವುದರಿಂದ ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಝುಲ್ ಕಅದಃ ತಿಂಗಳ 30 ದಿನಗಳು ಪೂರ್ತಿಗೊಂಡಿದೆ.

ಜುಲೈ 1 ಶುಕ್ರವಾರ ಝುಲ್ ಹಿಜ್ಜಃ ತಿಂಗಳ ಪ್ರಥಮ ದಿನವಾಗಿದ್ದು, ಜುಲೈ 9 ಶನಿವಾರದಂದು ಝುಲ್ ಹಿಜ್ಜಃ 9 ರ ಅರಫಾ ಉಪವಾಸ ಮತ್ತು ಜುಲೈ10 ರಂದು ಆದಿತ್ಯವಾರ ಈದುಲ್ ಅಝ್ಹಾ ಆಚರಿಸಲಾಗುವುದು ಎಂದು ಮಂಗಳೂರು ‘ಸಲಫಿ ಹಿಲಾಲ್ ಕಮಿಟಿ ರಚನಾ ಸಮಿತಿ’ (ಅಡ್ಹೋಕ್ ಸಮಿತಿ) ಪ್ರಕಟಣೆಯಲ್ಲಿ ತಿಳಿಸಿದೆ.

Join Whatsapp
Exit mobile version