ಜುಲೈ 10ರಂದು ಈದುಲ್- ಅಝ್ಹಾ: ದಕ್ಷಿಣ ಕನ್ನಡ ಖಾಝಿ ಘೋಷಣೆ

Prasthutha|

ಮಂಗಳೂರು : ಕಲ್ಲಿಕೋಟೆಯಲ್ಲಿ ಗುರುವಾರ ರಾತ್ರಿ ದುಲ್ ಹಜ್ ಚಂದ್ರದರ್ಶನವಾಗಿದೆ. ಹಾಗಾಗಿ ಜುಲೈ 1 ರಂದು ದುಲ್ ಹಜ್ ತಿಂಗಳು ಆರಂಭವಾಗಿದ್ದು ಜುಲೈ 10 ರಂದು ಈದುಲ್ ಅಝ್ಹಾ ( ಬಕ್ರೀದ್ ) ಆಚರಿಸಲಾಗುವುದು ಎಂದು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ.

- Advertisement -


ಜು 1ಶುಕ್ರವಾರ ದುಲ್ ಹಜ್ ತಿಂಗಳ ಪ್ರಥಮ ದಿನವಾಗಿದ್ದು , ಜು 9 ರಂದು ಅರಫಾ ಉಪವಾಸ ಮತ್ತು ಜು .10 ರಂದು ಈದುಲ್ ಅಝ್ಹಾ ಆಚರಿಸಲಾಗುವುದು ಎಂದು ಖಾಝಿ ತಿಳಿಸಿದ್ದಾರೆ ಎಂದು ಎಂದು ಮಸ್ಟಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ

►ಜುಲೈ 10ಕ್ಕೆ ಈದುಲ್ ಅಝ್ಹಾ: ಸಲಫಿ ಹಿಲಾಲ್ ಕಮಿಟಿ ಘೋಷಣೆ

- Advertisement -

ಕರ್ನಾಟಕದ ಕರಾವಳಿ ತೀರದಲ್ಲಿ ಧಾರಾಕಾರ ಮಳೆ ಮತ್ತು ಆಕಾಶದಲ್ಲಿ ಮೋಡ ಕವಿದಿರುವುದರಿಂದ ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಝುಲ್ ಕಅದಃ ತಿಂಗಳ 30 ದಿನಗಳು ಪೂರ್ತಿಗೊಂಡಿದೆ. ಜುಲೈ 1 ಶುಕ್ರವಾರ ಝುಲ್ ಹಿಜ್ಜಃ ತಿಂಗಳ ಪ್ರಥಮ ದಿನವಾಗಿದ್ದು, ಜುಲೈ 9 ಶನಿವಾರದಂದು ಝುಲ್ ಹಿಜ್ಜಃ 9 ರ ಅರಫಾ ಉಪವಾಸ ಮತ್ತು ಜುಲೈ10 ರಂದು ಆದಿತ್ಯವಾರ ಈದುಲ್ ಅಝ್ಹಾ ಆಚರಿಸಲಾಗುವುದು ಎಂದು ಮಂಗಳೂರು ‘ಸಲಫಿ ಹಿಲಾಲ್ ಕಮಿಟಿ ರಚನಾ ಸಮಿತಿ’ (ಅಡ್ಹೋಕ್ ಸಮಿತಿ) ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜುಲೈ 10ರಂದು ಈದುಲ್ ಅಝ್ಹಾ ಆಚರಿಸಲು ಬೆಂಗಳೂರು ಚಂದ್ರ ದರ್ಶನ ಸಮಿತಿ ನಿರ್ಧರಿಸಿದೆ.

ಗುರುವಾರ ಅಸ್ತ ಮಿಸಿದ ಶುಕ್ರವಾರ ರಾತ್ರಿ ದ್ಸುಲ್ ಹಿಜ್ಜಃ ತಿಂಗಳ ಚಂದ್ರ ದರ್ಶನವಾದ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಜುಲೈ 1 ಶುಕ್ರವಾರ ದುಲ್ ಹಜ್ ತಿಂಗಳ ಚಾಂದ್ ಒಂದು ಆಗಿದೆ, ಅದರಂತೆ ಜುಲೈ 09 ಶನಿವಾರ ಅರಫಾ ದಿನ ಮತ್ತು ಜುಲೈ 10, ಆದಿತ್ಯವಾರ ಈದುಲ್ ಅದ್’ಹಾ ಆಚರಿಸಲಾಗುತ್ತದೆ ಎಂದು ಉಳ್ಳಾಲ ಸಂಯುಕ್ತ ಜಮಾಅತ್ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.



Join Whatsapp